ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ನಟಿಸುತ್ತಿರುವ ‘ ಸೈ.ರಾ. ನರಸಿಂಹ ರೆಡ್ಡಿ‘ ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಇದೀಗ ಅಮಿತಾಬ್ ಬಚ್ಚನ್ ಅವರು ಚಿರಂಜೀವಿ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವೀಟರ್ ನಲ್ಲಿ ಮೂವಿ ಸೆಟ್‌ನಲ್ಲಿ ತೆಗೆದ ಚಿರಂಜೀವಿಯೊಂದಿಗಿನ ಫೋಟೋವೊಂದನ್ನು ಷೇರ್ ಮಾಡಿ 'ಚಿರಂಜೀವಿ ಜೊತೆ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತದೆ' ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಚಿರಂಜೀವಿ ಅವರ ಪುತ್ರ ರಾಮ್‌ಚರಣ್ ತೇಜ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸ್ವಾತಂತ್ಯ್ರ ಹೋರಾಟಗಾರ ' ಉಯ್ಯಾಲವಾಡ ನರಸಿಂಹರೆಡ್ಡಿ' ಅವರ ಜೀವನಚರಿತ್ರೆಯನ್ನೊಳಗೊಂಡ ಈ ಚಿತ್ರದಲ್ಲಿ ಅಮಿತಾಬ್ ಅವರು ಗೆಸ್ಟ್ ರೋಲ್ ಮಾಡುತ್ತಿದ್ದು, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿರುವ ಕಾರಣ ಅಮಿತಾಬ್ ಹೈದರಾಬಾದ್‌ನಲ್ಲೇ ಉಳಿದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ