ಹೈದರಾಬಾದ್ : ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟರಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಕೂಡ ಒಬ್ಬರು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗ ಪ್ರಭಾಸ್ ಅವರ ಚಿತ್ರವೊಂದನ್ನು ಖರೀದಿಸಲು ವಿತರಕರು ಹಿಂದೇಟು ಹಾಕುತ್ತಿದ್ದಾರಂತೆ.
ಹೌದು. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸಿರುವ ಹೊಸ ಸಿನಿಮಾ ರಾಧೆ-ಶ್ಯಾಮ್ ಸಿನಿಮಾವನ್ನು ಖರೀದಿಸಲು ವಿತರಕರು ಹಿಂದೇಟು ಹಾಕುತ್ತಿದ್ದಾರಂತೆ. ಇದಕ್ಕೆ ಕಾರಣವೇನೆಂದರೆ ಈ ಸಿನಿಮಾದ ವಿತರಣೆಗೆ ನಿರ್ಮಾಪಕರು ದೊಡ್ಡ ಮಟ್ಟದ ಹಣ ಕೇಳುತ್ತಿದ್ದಾರಂತೆ.
ಅಲ್ಲದೆ ರಾಧೆ ಶ್ಯಾಮ್ ಸಿನಿಮಾದ ಹಿಂದಿ, ತಮಿಳು, ಮಲಯಾಳಂ ಡಬ್ಬಿಂಗ್ ವಿತರಣೆ ಹಕ್ಕುಗಳಿಗೆ ಬೇಡಿಕೆ ಅಷ್ಟಾಗಿ ಇಲ್ಲದಾಗಿದೆಯಂತೆ. ಆದಕಾರಣ ಈ ಸ್ಟಾರ್ ನಟನ ಚಿತ್ರವನ್ನು ಖರೀದಿಸಲು ವಿತಕರು ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನಲಾಗಿದೆ.