ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಅಭಿಮಾನಿಗಳು ನ್ಯಾಯ ಸಿಗಬೇಕೆಂದು ಆಗ್ರಹ ಮಾಡುತ್ತಲೇ ಇದ್ದಾರೆ.
ಈ ನಡುವೆ ಸಿಬಿಐ, ಇಡಿ, ಎನ್ ಸಿ ಬಿ ತನಿಖೆ ನಡೆಸುತ್ತಿವೆ. ಎನ್ ಸಿ ಬಿ ವಿಚಾರಣೆ ವೇಳೆ ಡ್ರಗ್ಸ್ ಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಗೆ ಡ್ರಗ್ಸ್ ಸಂಗ್ರಹ ಮಾಡಿದ್ದು ನಟಿ ರಿಯಾ ಚಕ್ರವರ್ತಿ ಅಲ್ಲ. ಆದರೆ ಅವರ ಮ್ಯಾನೇಜರ್ ಸ್ಯಾಮ್ಯುಯೆಲ್ ಡ್ರಗ್ಸ್ ಸಂಗ್ರಹಿಸುತ್ತಿದ್ದರು ಎಂದು ಶೋಯಿಕ್ ಹೇಳಿದ್ದಾನೆ.
ಸುಶಾಂತ್ ಸಿಂಗ್ ರಜಪೂತ್‌ಗೆ ಅವರ ಮ್ಯಾನೇಜರ್ ಸ್ಯಾಮ್ಯುಯೆಲ್ ಡ್ರಗ್ಸ್ ಸಂಗ್ರಹ ಮಾಡುತ್ತಿದ್ದ ಮತ್ತು ಸಹೋದರಿ ರಿಯಾ ಚಕ್ರವರ್ತಿ ಅವರು ಡ್ರಗ್ಸ್ ಖರೀದಿಸುತ್ತಿದ್ದರು ಎಂದು ಶೋಯಿಕ್ ಚಕ್ರವರ್ತಿ ಹೇಳಿದ್ದಾನೆ.