ಕೊಚ್ಚಿ: ಇನ್ನೂ ಮಂಜು ವಾರಿಯರ್ ಅವರು ಹೇಳಿಕೆ ನೀಡಿದ ಬಳಿಕ ನನ್ನ ವಿರುದ್ಧ ಷಡ್ಯಂತ್ರ ಪ್ರಾರಂಭವಾಯಿತು. ಕೆಲವು ಮಾಧ್ಯಮಗಳು ಮತ್ತು ಪತ್ರಕರ್ತರೊಂದಿಗೆ ಸಹಾನುಭೂತಿ ಹೊಂದಿರುವ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ನಿರೂಪಣೆಯನ್ನು ಹರಡಲು ಸಹಕರಿಸಿದೆ ಎಂದು ಅತ್ಯಾಚಾರ, ಕಿಡ್ಯ್ನಾಪ್ ಪ್ರಕರಣದಲ್ಲಿ ದಿಲೀಪ್‌ಗೆ ಬಿಗ್ ರಿಲೀಫ್ ಸಿಕ್ಕ ಬಳಿಕ ಪ್ರತಿಕ್ರಿಯಿಸಿದ್ದಾರೆ.
ನಟಿ ಮಂಜು ವಾರಿಯರ್ ಅವರು ದಿಲೀಪ್ ಅವರ ಮೊದಲ ಪತ್ನಿಯಾಗಿದ್ದು, ಈ ಜೋಡಿ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ.
ಇನ್ನೂ ದಿಲೀಪ್ ಅವರು ಎರಡನೇ ಮದುವೆಯಾಗಿದ್ದಾರೆ.
ಬಹುಭಾಷಾ ನಟಿಯ ಕಿಡ್ಯ್ಯಾಪ್ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂನ ಖ್ಯಾತ ನಟ ದಿಲೀಪ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹೌದು ನಟ ವಿರುದ್ಧ ಯಾವುದೇ ಸಾಕ್ಷಿ ಇಲ್ಲದ ಕಾರಣ ಈ ಪ್ರಕರಣದಲ್ಲಿ ನಟನನ್ನು ಖುಲಾಷೆ ಮಾಡಿ ಕೋರ್ಟ್ ತೀರ್ಪು ನೀಡಿದೆ.
ಇನ್ನೂ ಪ್ರಕರಣ ಸಂಬಂಧ ಮಹತ್ವದ ತೀರ್ಪು ಹೊರಡುತ್ತಿದ್ದ ಹಾಗೇ ಪ್ರತಿಕ್ರಿಯಿಸಿದ ನಟ, "ಮೊದಲು, ದೇವರಿಗೆ ಧನ್ಯವಾದಗಳು". ನನ್ನ ಜತೆಯಿದ್ದ ತಮ್ಮ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದರು.
"ಕಳೆದ ಒಂಬತ್ತು ವರ್ಷಗಳಲ್ಲಿ ನನ್ನ ಪರವಾಗಿ ವಾದಿಸಿದ ಎಲ್ಲಾ ವಕೀಲರಿಗೆ ನಾನು ತುಂಬಾ ಋಣಿಯಾಗಿದ್ದೇನೆ" ಎಂದು ಹೇಳಿದ ದಿಲೀಪ್ ತಮ್ಮ ವಕೀಲರ ತಂಡಕ್ಕೆ ಧನ್ಯವಾದ ಅರ್ಪಿಸಿದರು.
ವಿವಿಧ ಕ್ಷೇತ್ರಗಳ ಜನರ ಬೆಂಬಲವನ್ನು ಒಪ್ಪಿಕೊಂಡ ಅವರು, “ಈ ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ಸಮಾಜದ ವಿವಿಧ ಕ್ಷೇತ್ರಗಳ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ.