ಕೊಚ್ಚಿ: ಬಹುಭಾಷಾ ನಟಿಯನ್ನು ಕಿಡ್ನ್ಯಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ರನ್ನು ಖುಲಾಸೆ ಮಾಡಲಾಗಿದೆ.
2017 ರಲ್ಲಿ ಘಟನೆ ನಡೆದಿತ್ತು. ಮಲಯಾಳಂ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದ ಜನಪ್ರಿಯ ನಟಿಯನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಘಟನೆ ಮಲಯಾಳಂ ಸಿನಿಮಾ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಈ ಪ್ರಕರಣದಲ್ಲಿ ಪಲ್ಸರ್ ಸುನಿ ಹಾಗೂ ಆರು ಮಂದಿಯನ್ನು ಆರೋಪಿಗಳೆಂದು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ನಟ ದಿಲೀಪ್ ಸೂತ್ರಧಾರ ಎನ್ನಲಾಗಿತ್ತು. ಈ ಸಂಬಂಧ ಕೆಲವು ದಿನ ದಿಲೀಪ್ ಬಂಧನಕ್ಕೊಳಗಾಗಿದ್ದರು.
ಪ್ರಕರಣದ ತೀರ್ಪು ಇಂದು ಪ್ರಕಟವಾಗಿದೆ. ಪ್ರಕರಣದಲ್ಲಿ 8 ನೇ ಆರೋಪಿಯಾಗಿದ್ದ ದಿಲೀಪ್ ರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ. ಉಳಿದ 6 ಮಂದಿಗಳನ್ನು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷೆ ಪ್ರಮಾಣ ಡಿಸೆಂಬರ್ 12 ರಂದು ಪ್ರಕಟವಾಗಲಿದೆ.