ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಮಿಲ್ಕಿಬ್ಯೂಟಿ ತಮನ್ನಾ ಕೂಡ ಒಬ್ಬರು.
ನಟಿ ತಮನ್ನಾ ಭಾಟಿಯಾ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್ ಬಂದಿದೆ.
ಆದರೆ ತಮನ್ನಾಳ ತಂದೆ ಸಂತೋಷ್ ಭಾಟಿಯಾ ಮತ್ತು ತಾಯಿ ರಜನಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟಿ ತಮನ್ನಾ ಟ್ವಿಟ್ ಮೂಲಕ ಈ ವಿಷಯ ತಿಳಿಸಿದ್ದು, ಅವರ ಪೋಷಕರು ಶೀಘ್ರವಾಗಿ ಗುಣವಾಗಲೆಂದು ಆಶಿಸಿದ್ದು, ನೀವೂ ಪ್ರಾರ್ಥಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.