Select Your Language

Notifications

webdunia
webdunia
webdunia
webdunia

ಐಸಿಯುವಿನಲ್ಲಿರುವ ರಜನಿಕಾಂತ್‌ಗೆ ನಿಜಕ್ಕೂ ಆಗಿದ್ದೇನು, ಹೆಲ್ತ್‌ ಬುಲೆಟಿನ್ ಬಿಡುಗಡೆ

ಐಸಿಯುವಿನಲ್ಲಿರುವ ರಜನಿಕಾಂತ್‌ಗೆ ನಿಜಕ್ಕೂ ಆಗಿದ್ದೇನು,  ಹೆಲ್ತ್‌ ಬುಲೆಟಿನ್ ಬಿಡುಗಡೆ

Sampriya

ಚೆನ್ನೈ , ಮಂಗಳವಾರ, 1 ಅಕ್ಟೋಬರ್ 2024 (18:22 IST)
ಚೆನ್ನೈ: ಆಸ್ಪತ್ರೆಗೆ ದಾಖಲಾಗಿರುವ ಮೆಗಾಸ್ಟಾರ್ ರಜನಿಕಾಂತ್ ಹೆಲ್ತ್‌ ಅಪ್‌ಡೇಟ್ ಬಗ್ಗೆ ಹೇಳಿಕೆಯನ್ನು ಬಿಡುಗಡೆಮಾಡಲಾಗಿದೆ. ರಜನಿಕಾಂತ್ ಅವರ ಹೃದಯ ಸಂಬಂಧಿ ಕಾಯಿಲೆಯಿಂದ ನಿನ್ನೆ ರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು.

ಇದೀಗ ಬಂದ ಮಾಹಿತಿ ಪ್ರಕಾರ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.  ರಜನಿಕಾಂತ್ ಅವರ ಹೃದಯದಿಂದ ಹೊರಹೋಗುವ ಮುಖ್ಯ ರಕ್ತನಾಳದಲ್ಲಿ ಊತವಿತ್ತು ಎಂದು ದೃಢಪಡಿಸಲಾಗಿದ್ದು ಅದಕ್ಕೆ ಸ್ಟೆಂಟ್‌ ಅನ್ನು ಹಾಕಲಾಗಿದೆ.

ಪ್ರಕಟನೆಯಲ್ಲಿ ಹೀಗಿದೆ: ರಜನಿಕಾಂತ್ ಅವರನ್ನು 30 ಸೆಪ್ಟೆಂಬರ್ 2024 ರಂದು ಗ್ರೀಮ್ಸ್ ರಸ್ತೆಯ ಅಪೋಲೋ ಹಾಸ್ಪಿಟಲ್ಸ್‌ಗೆ ದಾಖಲಿಸಲಾಯಿತು. ಅವರು ತಮ್ಮ ಹೃದಯದಿಂದ (ಮಹಾಪಧಮನಿಯ) ಹೊರಡುವ ಮುಖ್ಯ ರಕ್ತನಾಳದಲ್ಲಿ ಊತವನ್ನು ಹೊಂದಿದ್ದರು, ಇದನ್ನು ಶಸ್ತ್ರಚಿಕಿತ್ಸೆಯಿಲ್ಲದ, ಟ್ರಾನ್ಸ್‌ಕ್ಯಾತಿಟರ್ ವಿಧಾನದಿಂದ ಚಿಕಿತ್ಸೆ ನೀಡಲಾಯಿತು.

ರಜನಿಕಾಂತ್ ಅವರು ಸ್ಥಿರವಾಗಿದ್ದಾರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಮನೆಗೆ ಡಿಸ್ಚಾರ್ಜ್‌ ಆಗಬಹುದು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನ ಸಿಗಲ್ಲ, ಆದ್ರೆ ಭಾನುವಾರ ಮಿಸ್ ಮಾಡಲ್ಲ: ಫ್ಯಾನ್ಸ್ ಗೆ ರಚಿತಾ ರಾಮ್ ಪ್ರಾಮಿಸ್