ಬಾಲಿವುಡ್ ನಟಿ ಕಂಗನಾ ರಣಾವತ್ ರ ಮನೆ ಹಾಗೂ ಕಚೇರಿಯ ಕೆಲ ಭಾಗಗಳನ್ನು ಈಚೆಗೆ ಕೆಡವಿ ಹಾಕಲಾಗಿದೆ.
ಮುಂಬೈನ ಬಾಂದ್ರಾದಲ್ಲಿರುವ ಮನೆ ಹಾಗೂ ಕಟ್ಟಡದ ಕೆಲ ಭಾಗ ದ್ವಂಸ ಮಾಡಿದ್ದಕ್ಕೆ ಪರಿಹಾರವಾಗಿ 2 ಕೋಟಿ ರೂಪಾಯಿ ನೀಡಬೇಕು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಟಿ ಕಂಗನಾ ರಣಾವತ್ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಅಕ್ರಮವಾಗಿ ಕಟ್ಟಿದ್ದ ಕಟ್ಟಡದ ಭಾಗ ಹೊಡೆದು ಹಾಕಲು ಮುಂದಾಗಿತ್ತು. ಇದನ್ನು ವಿರೋಧಿಸಿ ಬಾಂಬೆ ಹೈಕೋರ್ಟ್ ನಿಂದ ನಟಿ ಕಂಗನಾ ತಡೆಯಾಜ್ಞೆ ತಂದಿದ್ದರು.
ಅಕ್ರಮವಾಗಿ ಮಹಾನಗರ ಪಾಲಿಕೆ ತಮ್ಮ ಕಚೇರಿ ಮತ್ತು ನಿವಾಸದ ಕೆಲ ಭಾಗ ಹೊಡೆದು ಹಾಕಿದ್ದು 2 ಕೋಟಿ ಪರಿಹಾರ ಕಟ್ಟಿಕೊಡುವಂತೆ ನಿರ್ದೇಶನ ನೀಡುವಂತೆ ನಟಿ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಟಿ ಕಂಗನಾ ಆರೋಪ, ಆಡಳಿತರೂಢ ಶಿವಸೇನೆ ಮುಖಂಡರನ್ನು ಕೆರಳಿಸುವಂತೆ ಮಾಡುತ್ತಿದೆ.