Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಆಗಿದ್ದೇನು?

ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಆಗಿದ್ದೇನು?
ಮುಂಬೈ , ಭಾನುವಾರ, 6 ಸೆಪ್ಟಂಬರ್ 2020 (20:26 IST)
ಬಾಲಿವುಡ್ ನಟ ಅರ್ಜುನ್ ಕಪೂರ್ ಗೆ ಕೋವಿಡ್ – 19 ದೃಢಪಟ್ಟಿದೆ.

ಅರ್ಜುನ್ ಕಪೂರ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

 “ನಾನು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದೇನೆ. ಪಾಸಿಟಿವ್ ವರದಿ ಬಂದಿದೆ. ಇದನ್ನು ನಿಮ್ಮೆಲ್ಲರಿಗೂ ತಿಳಿಸುವುದು ನನ್ನ ಕರ್ತವ್ಯ. ನಾನು ಸರಿಯಾಗಿದ್ದೇನೆ ಮತ್ತು ನಾನು ಲಕ್ಷಣ ರಹಿತನಾಗಿದ್ದೇನೆ. ವೈದ್ಯರು ಮತ್ತು ಅಧಿಕಾರಿಗಳ ಸಲಹೆಯ ಮೇರೆಗೆ ನಾನು ಮನೆಯಲ್ಲಿ ನನ್ನನ್ನು ಪ್ರತ್ಯೇಕವಾಗಿದ್ದೇನೆ.

ಹೋಂ ಕ್ವಾರಂಟೈನ್ ಗೆ ಒಳಗಾಗುತ್ತೇನೆ. ನಿಮ್ಮ ಬೆಂಬಲಕ್ಕಾಗಿ ಮುಂಚಿತವಾಗಿ ಧನ್ಯವಾದಗಳು ಮತ್ತು ಮುಂದಿನ ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ನಿಮ್ಮೆಲ್ಲರಿಗೂ ತಿಳಿಸಿರುತ್ತೇನೆ. ಮಾನವೀಯತೆಯು ಈ ವೈರಸ್ ಅನ್ನು ನಿವಾರಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದು ಅರ್ಜುನ್ ಕಪೂರ್ ಟ್ವಿಟ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಹಾಟ್ ನಟಿಗೆ ಕೊರೊನಾ ಬಂದಿದ್ದು ಎಲ್ಲಿಂದ?