Webdunia - Bharat's app for daily news and videos

Install App

ಟೆಕ್ಕಿಗಳ ಬದುಕಿನ ರೋಚಕ `ವೀಕೆಂಡ್’ ಕಥನ!

Webdunia
ಬುಧವಾರ, 22 ಮೇ 2019 (13:51 IST)
ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈಗಾಗಲೇ ಈ ಪಾತ್ರದ ಸುತ್ತಾ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳೂ ಆಗುತ್ತಿವೆ. ಈ ಕಾರಣದಿಂದಲೇ ಪ್ರೇಕ್ಷಕರೆಲ್ಲ ಬಿಡುಗಡೆಯ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ.
ಡಿ ಮಂಜುನಾಥ್ ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅಚ್ಚರಿಗಳ ಸಂತೆಯೇ ನೆರೆದಿದೆ. ಫ್ಯಾಮಿಲಿ ಸಮೇತರಾಗಿ ಎಲ್ಲ ವರ್ಗದ ಪ್ರೇಕ್ಷಕರೂ ನೋಡುವಂಥಾ ಸಿನಿಮಾ ವೀಕೆಂಡ್. ಇದರಲ್ಲಿ ಟೆಕ್ಕಿಗಳ ಬದುಕಿನ ಮೇಲೆ ಬೆಳಕು ಚೆಲ್ಲುವಂಥಾ ಕಥಾ ಹಂದರವಿದೆ. ಈ ಮೂಲಕವೇ ಸಮಸ್ತ ಯುವ ಸಮೂಹಕ್ಕೂ ಬಲವಾದೊಂದು ಸಂದೇಶವನ್ನು ರವಾನಿಸೋ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರಂತೆ.
ಟೆಕ್ಕಿಗಳೆಂದರೆ ಕೈ ತುಂಬಾ ಸಂಬಳ ಪಡೆಯುತ್ತಾರೆ. ಅದಕ್ಕೆ ಸರಿಯಾದ ಹೈಫೈ ಜೀವನ ಶೈಲಿಯನ್ನು ಅಳವಡಿಸಿಕೊಂಡು ವಿಪರೀತ ಕಮಿಟ್ ಮೆಂಟುಗಳನ್ನು ಮೈಮೇಲೆಳೆದುಕೊಳ್ಳುತ್ತಾರೆ. ವೀಕೆಂಡ್ ಮೋಜು ಮಸ್ತಿಗಳಲ್ಲಿ ಕಳೆದು ಹೋಗಿ ಬಿಟ್ಟಿರುತ್ತಾರೆ.


ಇಂಥವರು ಏಕಾಏಕಿ ಕೆಲಸ ಕಳೆದುಕೊಂಡಾಗ, ಹಣಕಾಸಿನ ಮುಗ್ಗಟುಗಳನ್ನು ಅನುಭವಿಸಬೇಕಾಗಿ ಬಂದಾಗ ಆ ಪರಿಸ್ಥಿತಿ ಭೀಕರವಾಗಿರುತ್ತೆ. ಇಂಥಾ ಅನೇಕ ಸೂಕ್ಷ್ಮ ಕಥಾ ಎಳೆಯೊಂದಿಗೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿ ಬಂದಿದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಮುಂದಿನ ಸುದ್ದಿ
Show comments