Publish Date: Sat, 14 Mar 2020 (16:15 IST)
Updated Date: Sat, 14 Mar 2020 (16:18 IST)
ವಿಭಿನ್ನ ಪೋಸ್ಟರ್ ಮೂಲಕ ಸ್ಯಾಂಡಲ್ವುಡ್ ಮಂದಿಯ ಹುಬ್ಬೇರಿಸಿದ್ದ ‘ವಿರಾಟಪರ್ವ’ಚಿತ್ರದ ಮಾಸ್ ಅಂಡ್ ಥ್ರಿಲ್ಲಿಂಗ್ ಟೀಸರ್ ರಿಲೀಸ್ ಆಗಿದೆ. ‘ವಿರಾಟಪರ್ವ’ ಚಿತ್ರದಟೀಸರ್ಗೆ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ರಿಲೀಸ್ ಆಗಿರೋಟೀಸರ್ ಆ ನಿರೀಕ್ಷೆಯನ್ನು ಹುಸಿಗೊಳಿಸದೇ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಮಾಡಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳಿಂದ ಕೂಡಿರೋ ‘ವಿರಾಟಪರ್ವ’ ಟೀಸರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮೂರು ಜನರ ಮನಸ್ಥಿತಿಗಳ ಸುತ್ತ ಕಥೆ ಹೆಣೆಯಲಾಗಿದ್ದು, ಸಂಬಂಧಗಳಿಗೆ ಪೆಟ್ಟು ಬಿದ್ದಾಗಮನುಷ್ಯಅವುಗಳನ್ನೆಲ್ಲ ಉಳಿಸಿಕೊಳ್ಳಲು ಏನೆಲ್ಲಾ ಹೋರಾಟ ಮಾಡುತ್ತಾನೆ ಅನ್ನೋದುವಿರಾಟ ಪರ್ವ ಚಿತ್ರದ ಓನ್ ಲೈನ್ ಕಹಾನಿ. ಮುದ್ದು ಮನಸ್ಸೇ ಚಿತ್ರದ ಮೂಲಕಸ್ಯಾಂಡಲ್ವುಡ್ಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ಅನಂತ್ ಶೈನ್ ಎರಡನೇ ಚಿತ್ರವಿದು. ಪ್ರಯೋಗಾತ್ಮಕ ಚಿತ್ರವಾಗಿದ್ದು ನೈಜ ಘಟನೆ ಆಧಾರಿತ ಸಬ್ಜೆಕ್ಟ್ ಚಿತ್ರದಲ್ಲಿದೆ.ಸದ್ಯ ರಿಲೀಸ್ ಆಗಿರೋ ಟೀಸರ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಚಿತ್ರದಲ್ಲಿ ಅರು ಗೌಡ, ಎಂ. ಜಿ ಅಭಿನಯ, ಯಶ್ ಶೆಟ್ಟಿ, ಚೈತ್ರಾ ಕೊಟೂರ್, ಸೇರಿದಂತೆಹಲವು ಕಲಾವಿದರು ಬಣ್ಣಹಚ್ಚಿದ್ದಾರೆ. ವಿನೀತ್ ರಾಜ್ ಮೆನನ್ ಮ್ಯೂಸಿಕ್, ಶಿವ ಬಿ.ಕೆ,ಶಿವುಸೇನಾ ಇಬ್ಬರು ಕ್ಯಾಮೆರಾ ಮ್ಯಾನ್ಗಳ ಕ್ಯಾಮೆರಾ ಕೈಚಳಕ ಚಿತ್ರದಲ್ಲಿದೆ. ಎಸ್ ಆರ್ಮೀಡಿಯಾ ಪ್ರೋಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರೋ ‘ವಿರಾಟಪರ್ವ’ ಚಿತ್ರಕ್ಕೆ ಸುನೀಲ್ ರಾಜ್ ಬಂಡವಾಳ ಹೂಡಿದ್ದಾರೆ.