Select Your Language

Notifications

webdunia
webdunia
webdunia
webdunia

ನಾಳೆ 'ವಿರಾಟ ಪರ್ವ' ಟೀಸರ್ ರಿಲೀಸ್..

ನಾಳೆ 'ವಿರಾಟ ಪರ್ವ' ಟೀಸರ್ ರಿಲೀಸ್..
ಬೆಂಗಳೂರು , ಶುಕ್ರವಾರ, 13 ಮಾರ್ಚ್ 2020 (13:48 IST)
ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆಯನ್ನ ಹುಟ್ಟಿಸಿರೋ ಸಿನಿಮಾ ವಿರಾಟಪರ್ವ. ಈಗಾಗಲೇ ಪೋಸ್ಟರ್ ನಿಂದ ಸದ್ದು ಮಾಡಿದ್ದ ಸಿನಿಮಾ ಇದೀಗ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗಲೇ ಯಶ್ ಶೆಟ್ಟಿಯವರ ಸೈನಿಕ ಪಾತ್ರದ ಪೋಸ್ಟರ್ ಬಹಳಷ್ಟು ವೈರಲ್ ಆಗಿತ್ತು. ನಾಳೆ ಟೀಸರ್ ರಿಲೀಸ್ ಆಗಲಿದ್ದು, ಕುತೂಹಲ ಮೂಡಿಸಿದೆ.
ಮೂರು ಮನಸ್ಥಿತಿಗಳ ಸುತ್ತ ಸುತ್ತುವ ಸಿನಿಮಾ. ಆ ಮೂವರು ಕೂಡ ಒಂದೇ ಕಡೆಯಲ್ಲಿ ವಾಸವಾಗಿರುತ್ತಾರೆ. ಅವರ ಲೈಫ್ ನಲ್ಲಿ ನಡೆದಂತ ನೈಜ ಘಟನೆಗಳನ್ನೆ ಇಟ್ಟುಕೊಂಡು ಸಿನಿಮಾದ ಕಥೆ ಸಾಗುತ್ತೆ. ಎಲ್ಲರಿಗೂ ಇಂಟರ್ ಲಿಂಕ್ ಇದ್ದು, ಬರುವ ಸಮಸ್ಯೆಗಳಲ್ಲಿ ಸಕ್ಸಸ್ ಆಗ್ತಾರ, ಅಥವಾ ಅಲ್ಲಿ ಏನಾದ್ರೂ ಯಡವಟ್ಟಾಗುತ್ತಾ ಎಂಬುದು ಸಿನಿಮಾದ ಕಥೆ.
 
'ಮುದ್ದು ಮನಸೇ' ಖ್ಯಾತಿಯ ಅನಂತ್ ಶೈನ್ ನಿರ್ದೇಶನದ ಎಸ್. ಆರ್ ಮಿಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಮತ್ತು ಸುನೀಲ್ ರಾಜ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
 
ವಿರಾಟಪರ್ವ ಸಿನಿಮಾಗೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ, ಶಿವು ಬಿಕೆ ಶಿವಸೇನಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಅರುಗೌಡ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸತೀಶ್ ನೀನಾಸಂ ಚಿತ್ರಕ್ಕೆ ಕಾಲಿವುಡ್ ಸಂಗೀತ ನಿರ್ದೇಶಕನ ಬ್ಯಾಗ್ರೌಂಡ್ ಸ್ಕೋರ್..!!