Publish Date: Tue, 28 Jan 2020 (12:26 IST)
Updated Date: Mon, 10 Feb 2020 (13:08 IST)
ಸ್ಯಾಂಡಲ್ವುಡ್ನಲ್ಲಿ ಈ ನಡುವೆ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ಕಾಣದಂತೆ ಮಾಯವಾದನು. ವಿಕಾಸ್, ಸಿಂಧುನಾಥ್ ಅಭಿನಯಿಸಿರುವ ಈ ಚಿತ್ರ ಇದೇ ತಿಂಗಳ 31ಕ್ಕೆ ಬಿಡುಗಡೆಯಾಗುತ್ತಿದೆ.
ಬಿಡುಗಡೆ ಸನಿಹದಲ್ಲೇ ಮತ್ತೊಂದು ಇಂಟ್ರಸ್ಟಿಂಗ್ ಟೀಸರ್ ರಿಲೀಸ್ ಮಾಡಿದೆ ಕಾಣದಂತೆ ಮಾಯವಾದನು ಟೀಂ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಖತ್ ಬಝ್ ಕ್ರಿಯೇಟ್ ಮಾಡಿರುವ ಚಿತ್ರತಂಡ ಈಗ ಬಿಡುಗಡೆ ಮಾಡಿರುವ ಟೀಸರ್ ಕೂಡ ಅಷ್ಟೇ ಕುತೂಹಲವನ್ನು ಕಾಯ್ದುಕೊಂಡಿದೆ.
ರಾಜ್ ಪಾತಿಪಾಟಿ ಆಕ್ಷನ್ ಕಟ್ ಹೇಳಿರೋ ಈ ಚಿತ್ರದಲ್ಲಿ ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿರೋದು ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಖುಷಿ ನೀಡಿದೆ. ಮುಗ್ಧ ಪ್ರೇಮಕಥೆ ಚಿತ್ರದಲ್ಲಿದ್ದು, ಸಾವನಪ್ಪುವ ಪ್ರಿಯಕರ ದೆವ್ವವಾಗಿ ಬಂದು ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವ ಇಂಟ್ರಸ್ಟಿಂಗ್ ಕಥಾಹಂದರ ಚಿತ್ರದಲ್ಲಿದೆ.
ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಅಚ್ಯುತ್ ಕುಮಾರ್,ಭಜರಂಗಿ ಲೋಕಿ, ಸುಚೇಂಧ್ರ ಪ್ರಸಾಧ್ ಸೇರಿದಂತೆ ಹಲವು ಕಲಾವಿದರ ದಂಡು ಚಿತ್ರದಲ್ಲಿದೆ. ಜನವರಿ 31ಕ್ಕೆ ಕಾಣದಂತೆ ಮಾಯವಾದನು ಚಿತ್ರ ಬಿಡುಗಡೆಯಾಗುತ್ತಿದೆ.