Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಕಂಠದಲ್ಲಿ 'ಕಳೆದೋದಾ ಕಾಳಿದಾಸ' ಹಾಡು ರಿಲೀಸ್..!

ಪವರ್ ಸ್ಟಾರ್
, ಬುಧವಾರ, 22 ಜನವರಿ 2020 (15:33 IST)
ಕಾಣದಂತೆ ಮಾಯವಾದನು ಸಿನಿಮಾ ಈಗಾಗಲೇ ಪೋಸ್ಟರ್, ಲಿರಿಕಲ್ ಸಾಂಗ್, ಟ್ರೇಲರ್ ನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾ ತನ್ನೆಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿ ಇದೀಗ ರಿಲೀಸ್ ಗೆ ರೆಡಿಯಾಗಿದೆ.

ಇದೇ ಜನವರಿ 31 ರಂದು ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. 'ಕಾಣದಂತೆ ಮಾಯವಾದನು' ಎಂದಾಕ್ಷಣಾ ಪವರ್ ಸ್ಟಾರ್ ಪುನೀತ್ ಹಾಡಿರುವ ಹಾಡು ಎಲ್ಲರ ಕಿವಿಯಲ್ಲೂ ಗುಯ್ ಗುಡುತ್ತೆ. ಈ ಸಿನಿಮಾದಲ್ಲೂ ಪುನೀತ್ ಕಂಠವನ್ನು ನಾವೂ ಮಿಸ್ ಮಾಡಿಕೊಳ್ಳುವ ಹಾಗೇ ಇಲ್ಲ. ಎಸ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡೊಂದನ್ನ ಹಾಡಿದ್ದು, ಇದೀಗ ಆ ಸಾಂಗ್ ರಿಲೀಸ್ ಆಗಿದೆ.
 
ಕಳೆದೋದಾ ಕಾಳಿದಾಸ ಎಂಬ ಹಾಡನ್ನ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಸಾಂಗ್ ಅದ್ಭುತವಾಗಿ ಮೂಡಿಬಂದಿದ್ದು, ಲೋಕೇಷನ್ ಕೂಡ ಅಷ್ಟೇ ಅದ್ಭುತವಾಗಿದೆ. ಅಲ್ಲೊಂದು ಸುಂದರ ಲೋಕವನ್ನೇ ಹಾಡಿನಲ್ಲಿ ಸೃಷ್ಠಿಸಲಾಗಿದೆ. ವಿಕಾಸ್ ಕೂಡ ಬಹಳ ರೋಮ್ಯಾಂಟಿಕ್ ಆಗಿ ಕಳೆದೋದಾ ಕಾಳಿದಾಸ ಹಾಡಿನಲ್ಲಿ ಕಾಣ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಗುಮ್ಮಿನೇನಿ ಸಂಗೀತ ನೀಡಿದ್ದು, ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಈ ಹಾಡು ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ರೀಚ್ ಆಗಿದೆ.
ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ 'ಕಾಣದಂತೆ ಮಾಯಾವಾದನು' ಮೂಲಕ ಪರಿಪೂರ್ಣ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ವಿಕಾಸ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ.
 
ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಂಗೆ ಅಭಿಮಾನಿಗಳು ಹೀಗೆ ಹೇಳೋದಾ?!