ನೆನಪಲ್ಲಿ ಅಮ್ಮನ ಸಮಾಧಿ ಮುಂದೆ ಸಕ್ಕತ್ ಸ್ಟೆಪ್ಸ್ ಹಾಕಿದ ವಿನೋದ್ ರಾಜ್

Sampriya
ಭಾನುವಾರ, 12 ಮೇ 2024 (12:02 IST)
Photo Courtesy X
ತಾಯಿ ಲೀಲಾವತಿ ಇಲ್ಲದ ನೋವಿನಲ್ಲೇ ದಿನ ಕಳೆಯುತ್ತಿರುವ ನಟ ವಿನೋದ್ ರಾಜ್ ಅವರು ಇದೀಗ ತನ್ನ ತಾಯಿಗೋಸ್ಕರ ದೇವಸ್ಥಾನವನ್ನು ಕಟ್ಟಿಸುತ್ತಿದ್ದಾರೆ. ಇನ್ನೂ ಅವರ ನೆನಪಲ್ಲಅಮ್ಮನ ಸಮಾಧಿ ಮುಂದೆ ಅವರಿಷ್ಟದ ಸ್ಟೆಪ್ಸ್‌ ಹಾಕಿ ವಿನೋದ್ ರಾಜ್ ಕುಣಿದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಾಯಿ ಮಗ ಹೀಗಿರಬೇಕು ಎಂಬುದಕ್ಕೆ ನಿದರ್ಶನವಾಗಿರುವ ವಿನೋದ್ ಅವರು ತಮ್ಮ ತಾಯಿ ಲೀಲಾವತಿ ಅವರನ್ನು ತಮ್ಮ ಜೀವಕ್ಕಿಂತ ಪ್ರೀತಿಸುತ್ತಾರೆ. ತಾಯಿ ಅಗಲಿಕೆಯ ನೋವಿನಲ್ಲೇ ಇರುವ ವಿನೋದ್ ಅವರು ತಮ್ಮ ತಾಯಿ ನೆನಪಿಗಾಗಿ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ.

ಅಮ್ಮನಿಗೆ ನಾನು ಡ್ಯಾನ್ಸ್ ಮಾಡುವುದು ಇಷ್ಟವೆಂದು ಹೇಳಿದ ವಿನೋದ್ ರಾಜ್ ಅವರು ಲೀಲಾವತಿ ಅವರ ಸಮಾಧಿ ಮುಂದೆ ಅವರಿಷ್ಟದ ಸ್ಟೆಪ್ಸ್ ಹಾಕಿ ಕುಣಿದಿದ್ದಾರೆ. ಸಾಮಾಜಿಕ ಜಾಲತಾಣದಕಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು, ಲೀಲಾವತಿ ಅಮ್ಮನಿಗೆ ತಕ್ಕ ಮಗ ನೀವು, ದೇವರಂತ ಮನುಷ್ಯ, ಮಾನವೀಯತೆ ಮೌಲ್ಯ ಉಳ್ಳ ಮನುಷ್ಯ ಎಂದು ಕೊಂಡಾಡಿದ್ದಾರೆ.

ಇನ್ನೂ ಲೀಲಾವತಿ ಅವರ ಗುಡಿಯ ಕೆಲಸ ಶುರುವಾಗಿದೆ. ತಾಯಿ ದೂರವಾಗಿದ್ದರು ಅವರ ನೆನಪಲ್ಲೇ ಇರುವ ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ನೆನೆದು ಈಚೆಗೆ ಶೋವೊಂರಲ್ಲಿ ಕಣ್ಣೀರು ಹಾಕಿದ್ದರು. ಜೀ ಕನ್ನಡದ ಮಹಾನಟಿ ಶೋನಲ್ಲಿ ಭಾಗವಹಿಸಿದ್ದ ಅವರು ನನಗೆ ಅಂತಾ ಇದ್ದ ಜೀವ ನಮ್ಮ ತಾಯಿಯದ್ದು. ಅವರ ನೆನಪು ದಿನನಿತ್ಯ ಕಾಡುತ್ತದೆ ಎಂದು ಎಮೋಷನಲ್ ಆದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಮುಂದಿನ ಸುದ್ದಿ
Show comments