Select Your Language

Notifications

webdunia
webdunia
webdunia
webdunia

ಬರಗಾಲದಲ್ಲಿ ಜಾನುವಾರಗಳಿಗೆ ಮೇವು ಕೊಟ್ಟ ವಿನೋದ್ ರಾಜ್,ಅಮ್ಮ ನಡೆದ ಹಾದಿಯಲ್ಲಿ ಮಗ

Actress Leelavathi Son

Sampriya

ಬೆಂಗಳೂರು , ಮಂಗಳವಾರ, 23 ಏಪ್ರಿಲ್ 2024 (18:52 IST)
Photo Courtesy X
ಬೆಂಗಳೂರು: ಕನ್ನಡದ ಖ್ಯಾತ ಹಿರಿಯ ನಟಿ ಲೀಲಾವತಿ ಅವರು ಪ್ರಾಣಿ, ಪಕ್ಷಿಗಳ ರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಎಲ್ಲರಿಗೂ ಮಾದರಿಯಾಗಿ ಬದುಕಿದ್ದವರು. ಅವರ ನಿಧನ ನಂತರ ಇದೀಗ ಅವರ ಮಗ ವಿನೋದ್ ರಾಜ್ ಕೂಡಾ ತಮ್ಮ ತಾಯಿಯ ಆಸೆಯಂತೆ ಪ್ರಾಣಿಗಳ ಆರೈಕೆಗೆ ಮುಂದಾಗಿದ್ದಾರೆ.

ಸದ್ಯ ರಾಜ್ಯದಲ್ಲಿ ಬಿಸಿಲಿ ತಾಪ ಜೋರಾಗಿದ್ದು, ನೀರಿಲ್ಲದೆ ಜನರು ಹಾಗೂ ಜಾನುವಾರುಗಳು ಪರದಾಡುವ ಸ್ಥಿತಿ ಬಂದೋದಗಿದೆ. ಬರಗಾಲದ ಹಿನ್ನೆಲೆ ವಿನೋದ್ ರಾಜ್‌ ಅವರು ಜಾನುವಾರುಗಳಿಗೆ ಮೇವು ನೀಡಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾಣಿ ಪಕ್ಷಿ ಸಂರಕ್ಷಣೆ ಮಾಡೋದು ತಾಯಿ ಲೀಲಾವತಿ ಅವರ ಆಸೆಯಾಗಿತ್ತು. ಅದರಂತೆಯೇ ವಿನೋದ್ ರಾಜ್ ಅವರು ಈ ಸಂದರ್ಭದಲ್ಲಿ ಕೆಆರ್‌ ಪೇಟೆಯ ರೈತರ ಜಾನುವಾರುಗಳಿಗೆ ಮೇವು ನೀಡಿದ್ದಾರೆ. ವಿನೋದ್ ಅವರ ನಡೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

2023ರ ಡಿಸೆಂಬರ್‌ 8ರಂದು ನಟಿ ಲೀಲಾವತಿ ಅವರು ನಿಧನರಾದರು. ಅಮ್ಮನ ಅಗಲಿಯ ನೋವಿನಲ್ಲಿದ್ದ ವಿನೋದ್ ಅವರು ಈಚೆಗೆ ಜೀ ಕನ್ನಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಮ್ಮ ಇಲ್ಲದೆ ಮನೆಯಲ್ಲಿ ಇರಲು ತುಂಬಾನೇ ಕಷ್ಟ ಆಗುತ್ತಿದೆ, ನನಗಾಗಿ ಇದ್ದ ಜೀವ ಅವರು. ಅವರ ಅಗಲಿಕೆಯಿಂದ ಹೊರ ಬರಲು ತುಂಬಾನೇ ಕಷ್ಟ ಪಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದರು.

ಇದೀಗ ತಾಯಿಯಂತೆ ಆಸೆಯಂತೆ ಪ್ರಾಣಿ ಪಕ್ಷಿಗಳ ಆರೈಕೆಗೆ ಮುಂದಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ಗೆ ನೋ ಎಂದಿದ್ದ ಶ್ರೀಲೀಲಾ ದಳಪತಿ ವಿಜಯ್ ಗೋಟ್ ನಲ್ಲಿ ಐಟಂ ಡ್ಯಾನ್ಸ್ ಮಾಡಲು ಓಕೆ ಅಂದ್ರು