Publish Date: Mon, 22 Apr 2024 (09:30 IST)
Updated Date: Mon, 22 Apr 2024 (09:41 IST)
Photo Courtesy: Instagram
ಬೆಂಗಳೂರು: ಕಿರುತೆರೆ ನಟಿ ಅಂಕಿತಾ ಅಮರ್ ಮತ್ತು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮದುವೆ ದಿರಿಸಿನಲ್ಲಿದ್ದು ಜಸ್ಟ್ ಮ್ಯಾರೀಡ್ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ.
ಇವರಿಬ್ಬರ ಮದುವೆ ಫೋಟೋ ನೋಡಿ ನಿಜ ಜೀವನದಲ್ಲೂ ಮದುವೆಯಾದರೇನೋ ಎಂದುಕೊಳ್ಳಬೇಡಿ. ಇಬ್ಬರೂ ಮದುವೆಯಾಗಿರುವುದು ಪರದೆ ಮೇಲೆ. ಶೈನ್ ಶೆಟ್ಟಿ-ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಜಸ್ಟ್ ಮ್ಯಾರೀಡ್.
ಈ ಸಿನಿಮಾದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಸುಮಾರು 45 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಬೆಂಗಳೂರು, ಮೈಸೂರು ಆಸುಪಾಸಿನಲ್ಲೇ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿದೆ.
ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ಶೈನ್-ಅಂಕಿತಾ ಜೊತೆಗೆ ಶ್ರುತಿ ಹರಿಹರನ್, ಮಾಳವಿಕಾ ಅವಿನಾಶ್, ರವಿಶಂಕರ್ ಗೌಡ, ದೇವರಾಜ್, ಅಚ್ಯುತ್ ಕುಮಾರ್ ಸೇರಿದಂತೆ ಪ್ರತಿಭಾವಂತ ನಟರ ದಂಡೇ ಇದೆ. ಹೆಸರೇ ಹೇಳುವಂತೆ ಇದೊಂದು ಲವ್ ಸ್ಟೋರಿಯಾಗಿದ್ದು, ಚಿತ್ರದಲ್ಲಿ 6 ಹಾಡುಗಳಿವೆ. ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಒಂದು ಹಾಡು ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಚಿತ್ರಕ್ಕೆ ಸಿ.ಆರ್. ಬಾಬಿ ಆಕ್ಷನ್ ಕಟ್ ಹೇಳಿದ್ದಾರೆ.