Daily Horoscope

Select Your Language

Notifications

webdunia
webdunia
webdunia
webdunia

ಈ ಮಾತು ನಿನ್ನ ತಾಯಿಗೆ ಹೇಳು: ಕೆಟ್ಟ ಕಾಮೆಂಟ್ ಮಾಡಿದವನಿಗೆ ಜಾಡಿಸಿದ ಆಂಕರ್ ಅನುಶ್ರೀ

Anchor Anushree
ಬೆಂಗಳೂರು: ಸೆಲೆಬ್ರಿಟಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಕೆಟ್ಟ ಶಬ್ಧಗಳಿಂದ ಕಾಮೆಂಟ್ ಮಾಡುವವರಿರುತ್ತಾರೆ. ಇಂತಹದ್ದೇ ಒಂದು ಕಾಮೆಂಟ್ ಮಾಡಿದವನಿಗೆ ಆಂಕರ್ ಅನುಶ್ರೀ ತಕ್ಕ ತಿರುಗೇಟು ನೀಡಿದ್ದಾರೆ.

ಅನುಶ್ರೀ ನಿನ್ನೆ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ನೇಹಾಗೆ ನ್ಯಾಯ ಸಿಗಲಿ ಎಂದು ಭಾವುಕ ಸಂದೇಶ ಬರೆದಿದ್ದರು. ಇದಕ್ಕೆ ನೆಟ್ಟಿಗನೊಬ್ಬ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ. ಇದಕ್ಕೆ ಅನುಶ್ರೀ ತಿರುಗೇಟು ನೀಡಿದ್ದು, ನಿನ್ನ ತಾಯಿಗೆ ಹೋಗಿ ಈ ಮಾತು ಹೇಳು ಎಂದಿದ್ದಾರೆ.

ಅತ್ಯಂತ ಕೆಟ್ಟ ಶಬ್ಧ ಬಳಕೆ ಮಾಡಿದ್ದ ನೆಟ್ಟಿಗ, ಟ್ರೋಲ್ ಪೇಜ್ ಗಳು ಹೇಳಿದ್ಮೇಲ್ ಈವತ್ತು ಕಾಮೆಂಟ್ ಮಾಡಿದ್ದೀಯಾ? ನಿನ್ನ ….(ಅತ್ಯಂತ ಕೆಟ್ಟ ಪದ)ಗೆ ಮಧ್ಯರಾತ್ರಿ ಬರ್ತ್ ಡೇ ವಿಶ್ ಮಾಡುತ್ತೀಯಾ. ಥೂ ಎಂದು ಕಾಮೆಂಟ್ ಮಾಡಿದ್ದ. ಈತನ ಕಾಮೆಂಟ್ ಗೆ ಪ್ರತಿಕ್ರಿಯಿಸಿದ ಅನುಶ್ರೀ ಈ ಮಾತು ಹೋಗಿ ನಿನ್ನ ತಾಯಿಗೆ ಹೇಳು. ಬೇರೆ ಹೆಣ್ಣನ್ನು ನೀನು ಏನೆಂದು ಕರೆದೆ ಎಂದು. ನಿಮ್ಮಂತಹವರಿಂದ ಯಾವ ಹೆಣ್ಣಿಗೂ ಗೌರವ ಇಲ್ಲ. ನಾಚಿಕೆಯಾಗಬೇಕು ನಿನಗೆ ಎಂದು ತಿರುಗೇಟು ನೀಡಿದ್ದರು.

ಅಷ್ಟೇ ಅಲ್ಲದೆ, ಆತನ ಪೋಸ್ಟ್ ಶೇರ್ ಮಾಡಿಕೊಂಡ ಅನುಶ್ರೀ ಇದೂ ಕೂಡಾ ಒಂದು ರೀತಿಯ ಮಾನಸಿಕ ಅತ್ಯಾಚಾರ, ಮಾನಸಿಕ ಕೊಲೆ, ಇವ್ರಿಗೆ ಯಾರು ಹಕ್ಕು ಕೊಟ್ರು ಹೆಣ್ಣಿಗೆ ಇಷ್ಟು ಸುಲಭವಾಗಿ ಅಸಭ್ಯವಾಗಿ ಮಾತಾಡೋಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಜನರ ಪ್ರತಿಕ್ರಿಯೆಯನ್ನೂ ಕೇಳಿದ್ದಾರೆ. ಹಲವು ಅನುಶ್ರೀಗೆ ಬೆಂಬಲಿಸಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಹೆಣ್ಣು ಅಬಲೆಯಲ್ಲ' ಎಂದು ಒನಕೆ ಓಬವ್ವ ರೂಪ ತಾಳಿದ ಡಿಕೆಶಿ ಪುತ್ರಿ ಐಶ್ವರ್ಯ