Select Your Language

Notifications

webdunia
webdunia
webdunia
webdunia

'ಹೆಣ್ಣು ಅಬಲೆಯಲ್ಲ' ಎಂದು ಒನಕೆ ಓಬವ್ವ ರೂಪ ತಾಳಿದ ಡಿಕೆಶಿ ಪುತ್ರಿ ಐಶ್ವರ್ಯ

Aishwaryya Shivkumar

Sampriya

ಬೆಂಗಳೂರು , ಶನಿವಾರ, 20 ಏಪ್ರಿಲ್ 2024 (19:01 IST)
photo Courtesy Instagram
ಬೆಂಗಳೂರು: ಸದ್ಯ ಚಿಕ್ಕಪ್ಪ ಡಿಕೆ ಸುರೇಶ್ ಪರ ಮತ ಪ್ರಚಾರ ಮಾಡುತ್ತಿರುವ ಡಿಕೆಶಿ ಪುತ್ರಿ ಐಶ್ವರ್ಯ ಶಿವಕುಮಾರ್ ಅವರು ಒನಕೆ ಓಬವ್ವ ಅವರ ವೇಷ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿ ನಾರಿ ಶಕ್ತಿ ಬಗ್ಗೆ ಸಾರಿದ್ದಾರೆ.

ಒನಕೆ ಓಬವ್ವ ಅವರು ಕರ್ನಾಟಕದ ವೀರ ವನಿತೆಯರಲ್ಲಿ ಒಬ್ಬರಾಗಿದ್ದಾರೆ. ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿರುವ ಹೆಸರು ಒನಕೆ ಓಬವ್ವ.

ಇದೀಗ ಐಶ್ವರ್ಯ ಶಿವಕುಮಾರ್ ಅವರು ಒನಕೆ ಓಬವ್ವ ವೇಷ ಹಾಕಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೆಲವೇ ಗಂಟೆಗಳಲ್ಲಿ ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.  ಇದಲ್ಲದೇ ನಾರಿ ಶಕ್ತಿಯ ಬಗ್ಗೆ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ.

ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ. ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. 'ಧೈರ್ಯಂ ಸರ್ವತ್ರ ಸಾಧನಂ.' ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್ 'ಆನೆ'ಗೆ ವಿಶೇಷ ಟ್ರೀಟ್ ಕೊಟ್ಟ ಕಿಚ್ಚ ಸುದೀಪ್ ಕುಟುಂಬ