ಕನ್ನಡ ಸೀಸನ್ 10ರಲ್ಲಿ ತಮ್ಮ ಅಗ್ರೆಸ್ ನಡವಳಿಕೆ ಮೂಲಕ ವಿನಯ್ ಗೌಡ ಅವರು ಭಾರೀ ಸುದ್ದಿಯಾಗಿದ್ದರು. ಬಿಗ್‌ಬಾಸ್ ಮೂಲಕ ವಿನಯ್ ಗೌಡ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಇನ್ನೂ ಸೀಸನ್ 10ರ ಸ್ಪರ್ಧಿಗಳ ಜತೆ ನಟ ಸುದೀಪ್ ಅವರು ಕೂಡಾ ತುಂಬಾನೇ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದೀಗ ನಟ ಸುದೀಪ್ ಕುಟುಂಬದ ಜತೆ ನಟ ವಿನಯ್ ಅವರು ಊಟ ಸವಿದಿದ್ದಾರೆ.
ಬಿಗ್‌ಬಾಸ್ ಫೈನಲ್ ವೇದಿಕೆಯಲ್ಲೂ ನಟ ಸುದೀಪ್ ಅವರು ವಿನಯ್ ನಡವಳಿಕೆ ಬಗ್ಗೆ ಕೊಂಡಾಡಿದ್ದರು. ಇನ್ನೂ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಬಯಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದಕ್ಕೂ ಸುದೀಪ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೀಗ ಕಿಚ್ಚ ಅವರ ಕುಟುಂಬ ವಿನಯ್ ಅವರನ್ನು ಮನೆಗೆ ಆಹ್ವಾನಿಸಿ ಒಟ್ಟಿಗೆ ಕಾಲ ಕಳೆದಿದ್ದಾರೆ.
ಈ ಫೋಟೋಗಳನ್ನು ವಿನಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಇದ್ದಾರೆ.
ಈ ಫೋಟೋಗೆ 'ಹಂಬಲ್ ಫ್ಯಾಮಿಲಿ. ಅದ್ಭುತ ಊಟಕ್ಕೆ ಧನ್ಯವಾದ. ಡೆಸರ್ಟ್ ಅತ್ಯುತ್ತಮವಾಗಿತ್ತು' ಎಂದು ವಿನಯ್ ಬರೆದಿದ್ದಾರೆ. ಈ ಪೋಸ್ಟ್ಗೆ ಸಾನ್ವಿ ಅವರು ರಿಪ್ಲೈ ಮಾಡಿದ್ದು, ಹಾರ್ಟ್ ಎಮೋಜಿ ಹಾಕಿದ್ದಾರೆ.