Select Your Language

Notifications

webdunia
webdunia
webdunia
webdunia

ತಂದೆಯ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್ ಪ್ರಭಾಕರ್: ಶುಭ ಹಾರೈಸಿದ ರವಿಚಂದ್ರನ್

ತಂದೆಯ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್ ಪ್ರಭಾಕರ್: ಶುಭ ಹಾರೈಸಿದ ರವಿಚಂದ್ರನ್
ಬೆಂಗಳೂರು , ಗುರುವಾರ, 7 ಜುಲೈ 2022 (09:50 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟರ ಸಾಲಿನಲ್ಲಿ ಟೈಗರ್ ಪ್ರಭಾಕರ್ ಹೆಸರೂ ಸೇರಿದೆ. ಈ ನಟನನ್ನು ಇಂದಿಗೂ ಕನ್ನಡ ಚಿತ್ರರಂಗ ಮರೆತಿಲ್ಲ.

ಇದೀಗ ಅವರ ಪುತ್ರ, ನಟ ವಿನೋದ್ ಪ್ರಭಾಕರ್ ತಂದೆಯ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಟೈಗರ್ ಪ್ರಭಾಕರ್ ಹೆಸರನ್ನು ಶಾಶ್ವತವಾಗಿಡಲು ಪ್ರಯತ್ನ ನಡೆಸಿದ್ದಾರೆ. ಈ ನಿರ್ಮಾಣ ಸಂಸ್ಥೆಗೆ  ‘ಟೈಗರ್ ಟಾಕೀಸ್’ ಎಂಬ ಹೆಸರಿಡಲಾಗಿದ್ದು, ಆ ಸಂಸ್ಥೆ ಮುಖಾಂತರ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡಲಾಗಿದೆ.

ನಿನ್ನೆ ಈ ನಿರ್ಮಾಣ ಸಂಸ್ಥೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಧಿಕೃತ ಚಾಲನೆ ನೀಡಿ ವಿನೋದ್ ಪ್ರಭಾಕರ್ ಗೆ ಶುಭ ಹಾರೈಸಿದರು. ಇನ್ನಷ್ಟು ಸಿನಿಮಾಗಳನ್ನು ಈ ನಿರ್ಮಾಣ ಸಂಸ್ಥೆಯ ಮುಖಾಂತರ ಹೊರತರುವ ಯೋಜನೆ ವಿನೋದ್ ಪ್ರಭಾಕರ್ ಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 9 ಕ್ಕೆ ತಯಾರಿ ಶುರು