Select Your Language

Notifications

webdunia
webdunia
webdunia
webdunia

ಫ್ಯಾನ್ ವಾರ್ ನಡುವೆ ಪೊಲೀಸ್ ಠಾಣೆ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

Vijayalakshmi Darshan
ಬೆಂಗಳೂರು: ಕಿಚ್ಚ ಸುದೀಪ್ ಮಾತಿಗೆ ಕೌಂಟರ್ ಕೊಟ್ಟ ಬಳಿ ದರ್ಶನ್-ಸುದೀಪ್ ಫ್ಯಾನ್ಸ್ ವಾರ್ ಹೆಚ್ಚಾಗಿದ್ದು ಇದರ ನಡುವೆ ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ರೆಡಿ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಕೆಲವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕೌಂಟರ್ ಕೊಟ್ಟಿದ್ದರು. ಇದಾದ ಬಳಿಕ ತಣ್ಣಗಾಗಿದ್ದ ಸುದೀಪ್-ದರ್ಶನ್ ಫ್ಯಾನ್ ವಾರ್ ತಾರಕಕ್ಕೇರಿದೆ.

ಇದರ ನಡುವೆ ವಿಜಯಲಕ್ಷ್ಮಿ ತಮಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ನೆಗೆಟಿವ್ ಕಾಮೆಂಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೇಟ್ ಕಾಮೆಂಟ್ ಮಾಡಿದವರ ಖಾತೆ ಹೆಸರು, ಸ್ಕ್ರೀನ್ ಶಾಟ್ ಸಮೇತ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವಿಜಯಲಕ್ಷ್ಮಿ ದೂರು ನೀಡಿದ ಹಲವು ಖಾತೆಗಳಲ್ಲಿ ಸುದೀಪ್ ಫ್ಯಾನ್ಸ್ ಹೆಸರಿದೆ ಎನ್ನಲಾಗಿದೆ. ಇದೀಗ ಪೊಲೀಸರು ಕೂಡಾ ದೂರು ಸ್ವೀಕರಿಸಿದ್ದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಈಗ ಫ್ಯಾನ್ ವಾರ್ ಮತ್ತೊಂದು ಹಂತಕ್ಕೆ ತಲುಪಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರಗಡ್ ಲುಕ್‌ನಲ್ಲಿ ಬಂದ ವಿಜಯ್ ದೇವರಕೊಂಡ, ಭಾರೀ ನಿರೀಕ್ಷೆ