ಬೆಂಗಳೂರು: ನಟ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ರೆಡಿ ಎಂದ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೌಂಟರ್ ಕೊಟ್ಟಿದ್ದರು. ಇದೀಗ ಕಿಚ್ಚ ಸುದೀಪ್ ಇದಕ್ಕೆ ತಿರುಗೇಟು ಕೊಟ್ಟಿದ್ದು ನಾನ್ಯಾಕೆ ಆ ನಟನ ಬಗ್ಗೆ ಮಾತನಾಡಲಿ? ಎಲ್ಲೋ ಗಂಟೆ ಹೊಡೆದರೆ ಇನ್ನೆಲ್ಲೋ ಸದ್ದಾಗುತ್ತದೆ ಎಂದಿದ್ದಾರೆ.
ಮಾರ್ಕ್ ಪ್ರಿ ರಿಲೀಸ್ ಈವೆಂಟ್ ನಲ್ಲಿ ಹುಬ್ಬಳ್ಳಿಯಲ್ಲಿ ವೇದಿಕೆಯಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್ ಹೊರಗೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗುತ್ತಿದೆ. ನಾನು ಯುದ್ಧಕ್ಕೆ ಸಿದ್ಧ ಎಂದಿದ್ದರು. ಅವರ ಮಾತಿಗೆ ಕೌಂಟರ್ ಎನ್ನುವಂತೆ ಮರುದಿನ ವಿಜಯಲಕ್ಷ್ಮಿ ಡಿ ಬಾಸ್ ಅಭಿಮಾನಿಗಳ ಮುಂದೆ ಕೆಲವರು ದರ್ಶನ್ ಇಲ್ಲದೇ ಇದ್ದಾಗ ವೇದಿಕೆಗಳಲ್ಲಿ ಏನೇನೋ ಮಾತನಾಡುತ್ತಾರೆ. ಅವರ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳಬಾರದು ಎಂದಿದ್ದರು.
ಇವರಿಬ್ಬರ ಮಾತಿನಿಂದ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಡಿಬಾಸ್ ಮತ್ತು ಕಿಚ್ಚ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಇದರ ನಡುವೆ ನಿನ್ನೆ ಮಾಧ್ಯಮಗಳ ಮುಂದೆ ಕಿಚ್ಚ ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ನಾನು ಮಾತನಾಡಿರುವುದು ಪೈರಸೆ ಬಗ್ಗೆ. ಅಷ್ಟಕ್ಕೂ ಪೈರಸಿ ಎಂದೇ ಆವತ್ತು ಅಲ್ಲಿ ಹೇಳಬೇಕಾದ ಅವಶ್ಯಕತೆ ನನಗಿರಲಿಲ್ಲ. ಆದರೆ ನನ್ನ ಸಿನಿಮಾವನ್ನು ಕಾಪಾಡುವುದು ನನ್ನ ಕರ್ತವ್ಯ. ನನ್ನ ಸಿನಿಮಾವನ್ನು ಕಾಪಾಡಿಕೊಳ್ಳುವ ಹಕ್ಕು ನನಗಿಲ್ವಾ?
ಅಷ್ಟಕ್ಕೂ ಆ ನಟನ ಬಗ್ಗೆ ನಾನ್ಯಾಕೆ ಮಾತನಾಡಲಿ? ಸ್ಯಾಂಡಲ್ ವುಡ್ ನಲ್ಲಿ ಅನೇಕ ನಟರಿದ್ದಾರೆ. ಉಪೇಂದ್ರ ಸರ್ ಇದ್ದಾರೆ, ಶಿವಣ್ಣ ಇದ್ದಾರೆ, ಗೋಲ್ಡನ್ ಸ್ಟಾರ್ ಇದ್ದಾರೆ, ಧ್ರುವ ಸರ್ಜಾ ಇದ್ದಾರೆ, ಯಶ್ ಇದ್ದಾರೆ. ಅವರು ಯಾರೂ ನನ್ನ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಲ್ಲಿ ಮಾತ್ರ ಎಲ್ಲೋ ಹೊಡೆದ ಗಂಟೆ ಇಲ್ಲಿ ಯಾಕೆ ಸದ್ದು ಮಾಡ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಅದೂ ನಾನು ಹುಬ್ಬಳ್ಳಿಯಲ್ಲಿ ಮಾತನಾಡಿದ ಒಂದು ದಿನ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಒಂದು ದಿನದ ನಂತರ ಪ್ರತಿಕ್ರಿಯೆ ಬಂದಿದೆ. ನಾನು ಯಾರ ಹೆಸರನ್ನೂ ಉಲ್ಲೇಖಿಸಿ ಮಾತನಾಡಿಲ್ಲ. ಅವರು ಯಾರ ಬಗ್ಗೆ ಮತ್ತು ಯಾಕೆ ಹೇಳಿದರು ಎಂದು ಅವರನ್ನೇ ಕೇಳಿ ಎಂದಿದ್ದಾರೆ.