Daily Horoscope

Select Your Language

Notifications

webdunia
webdunia
webdunia
webdunia

ಕಾಡಲ್ಲಿ ಎಲ್ಲಾ ಪ್ರಾಣಿಗಳೂ ಇರ್ತಾವೆ, ಆದರೆ ಸಿಂಹನೇ ರಾಜ: ಕಿಚ್ಚನಿಗೆ ಟಾಂಗ್ ಕೊಟ್ಟ ದರ್ಶನ್ ಆಪ್ತ ಧನ್ವೀರ್

Darshan-Dhanveerah
ಬೆಂಗಳೂರು: ಕಾಡಲ್ಲಿ ಎಲ್ಲಾ ಪ್ರಾಣಿಗಳೂ ಇರ್ತಾವೆ. ಆದರೆ ಕಾಡಿಗೆ ಸಿಂಹನೇ ರಾಜ ಎಂದು ಕಿಚ್ಚ ಸುದೀಪ್ ಗೆ ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಟಾಂಗ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ಯುದ್ಧಕ್ಕೆ ರೆಡಿ ಎಂದಿದ್ದು ಈಗ ಡಿಬಾಸ್ ಫ್ಯಾನ್ಸ್ ವಾರ್ ಶುರು ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ನಿನ್ನೆ ಕಿಚ್ಚನಿಗೆ ಟಾಂಗ್ ಕೊಟ್ಟು ಮಾತನಾಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ವಿರುದ್ಧ ಮಾತಿನ ಯುದ್ಧವೇ ಶುರು ಮಾಡಿದ್ದಾರೆ.

ಇದರ ಬೆನ್ನಲ್ಲೇ ಈಗ ನಟ ಧನ್ವೀರ್ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ನಿನ್ನೆ ಮಾತನಾಡಿರುವ ವಿಡಿಯೋ ಹಂಚಿಕೊಂಡು ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ ದರ್ಶನ್ ಜೊತೆಗಿರುವ ಫೋಟೋ ಹಂಚಿಕೊಂಡು ಕಾಡಿನಲ್ಲಿ ಹಲವು ಪ್ರಾಣಿಗಳಿರುತ್ತವೆ. ಆದರೆ ಸಿಂಹನೇ ರಾಜ ಎಂದು ದಳಪತಿ ವಿಜಯ್ ಅವರ ಡೈಲಾಗ್ ಒಂದನ್ನು ಹಾಕಿಕೊಂಡಿದ್ದಾರೆ.

ಈ ಮೂಲಕ ಕಿಚ್ಚ ಸುದೀಪ್ ಗೆ ಧನ್ವೀರ್ ಟಾಂಗ್ ಕೊಟ್ಟಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ಜೈಲು ಸೇರಿದ ಬಳಿಕ ಧನ್ವೀರ್ ಅವರ ಮನೆ ಮಗನಂತೇ ಜೊತೆಗೇ ಇದ್ದವರು. ಈಗ ದರ್ಶನ್ ಪರವಾಗಿ ಪೋಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಗಂಡ ಹೊಡೆದಾಗ ಸಪೋರ್ಟ್ ಮಾಡಿದ್ದೇ ನಮ್ ಬಾಸ್ ಎಂದ ಕಿಚ್ಚ ಸುದೀಪ್ ಫ್ಯಾನ್ಸ್