Publish Date: Sat, 11 Jan 2020 (09:06 IST)
Updated Date: Sat, 11 Jan 2020 (09:08 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಹಲವು ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿದ್ದರೂ ಪ್ರೇಕ್ಷಕರ ನೆನಪಿನಲ್ಲುಳಿಯುವಂತೆ ಮಾಡಿದ್ದು ಕಡಿಮೆ. ಆದರೆ ಮಾಲ್ಗುಡಿ ಡೇಸ್ ವಿಜಯ್ ರಾಘವೇಂದ್ರಗೆ ಒಂದು ಮೈಲಿಗಲ್ಲು ಸಿನಿಮಾವಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ.
ವಿಜಯ್ ರಾಘವೇಂದ್ರ ತಾತನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಮಾಲ್ಗುಡಿ ಡೇಸ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಇದು ಪಕ್ಕಾ ಚಿನ್ನಾರಿ ಮುತ್ತನ ಕಮ್ ಬ್ಯಾಕ್ ಸಿನಿಮಾವಾಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಟೀಸರ್ ನಲ್ಲಿ ಇಬ್ಬರು ಮಕ್ಕಳ ಜತೆಗೆ ತಾತನ ಗೆಟಪ್ ನಲ್ಲಿರುವ ವಿಜಯ್ ರಾಘವೇಂದ್ರ ಇವರೇನಾ ಎನ್ನುವಷ್ಟು ಪ್ರಬುದ್ಧರಾಗಿ, ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಕಿಶೋರ್ ಮೂಡಬಿದ್ರೆ ನಿರ್ದೇಶನದ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ.