ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ತೆಲುಗಿನಲ್ಲಿ ಕಲ್ಯಾಣ್ ದೇವ್ ಜತೆಗೆ ಸೂಪರ್ ಮಚ್ಚಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.
ಈ ಸಿನಿಮಾದ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ. ಈ ನಡುವೆ ಈ ಸಿನಿಮಾವನ್ನು ಕನ್ನಡದಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಮೂಲಕ ಕಲ್ಯಾಣ್ ಮೊದಲ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ.
‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಎನ್ನುವ ಟೈಟಲ್ ನಲ್ಲಿ ಇದು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಪ್ರಕಟಿಸಿರುವ ರಚಿತಾ, ಕಲ್ಯಾಣ್ ಗೆ ಸ್ಯಾಂಡಲ್ ವುಡ್ ಗೆ ಸ್ವಾಗತ ಕೋರಿದ್ದಾರೆ. ಸಿನಿಮಾ ಬಿಡುಗಡೆ ಯಾವಾಗ ಎಂದು ಇನ್ನೂ ಚಿತ್ರತಂಡ ಬಹಿರಂಗಪಡಿಸಿಲ್ಲ.