Publish Date: Wed, 08 Jan 2020 (10:19 IST)
Updated Date: Wed, 08 Jan 2020 (10:21 IST)
ಬೆಂಗಳೂರು: ಎಲ್ಲವೂ ಅಂದುಕೊಡಂತೇ ನಡೆದಿದ್ದರೆ ಇಂದು ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಹಾಗಂತ ಕೆಜಿಎಫ್ ಚಿತ್ರತಂಡ ಹಾಗೂ ಯಶ್ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ.
ರಾಕಿ ಬಾಯ್ ಹುಟ್ಟುಹಬ್ಬದ ಸಲುವಾಗಿ ಇಂದು ಕೆಜಿಎಫ್ 2 ಎರಡನೇ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಅದರ ಜತೆಗೆ ನಿನ್ನೆ ಮಧ್ಯರಾತ್ರಿ ಬೃಹತ್ ಕೇಕ್ ಕಟ್ ಮಾಡಿದ ಯಶ್ ಅಭಿಮಾನಿಗಳ ಮುಂದೆ ಕೆಜಿಎಫ್ 2 ಸಿನಿಮಾದ ಖಡಕ್ ಡೈಲಾಗ್ ಒಂದನ್ನು ಹೇಳಿ ಮನರಂಜಿಸಿದ್ದಾರೆ. ಟೀಸರ್ ತರಲಾಗದಿದ್ದಕ್ಕೆ ಅಭಿಮಾನಿಗಳ ಕ್ಷಮೆ ಕೇಳಿ ಯಶ್ ಡೈಲಾಗ್ ಹೇಳಿದ್ದಾರೆ.
‘ಏನಂದೆ? ಒಂದು ಹೆಜ್ಜೆ ಇಟ್ಕೊಂಡು ಬಂದವನು ಅಂತಾನಾ? ಕರೆಕ್ಟ್ ಗಡಿಯಾರದಲ್ಲಿ ಒಂದು ಗಂಟೆ ಆಗಬೇಕಾದರೆ ದೊಡ್ಡ ಮುಳ್ಳು 60 ಹೆಜ್ಜೆ ಮುಂದೆ ಬರಬೇಕು, ಆದರೆ ಚಿಕ್ಕ ಮುಳ್ಳು... ಒಂದು ಹೆಜ್ಜೆ ಇಟ್ರೆ ಸಾಕು.. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ಇನ್ಮೇಲೆ ಆ ಟೆರಿಟ್ಟರಿ ನನ್ನದು ಈ ಟೆರಿಟ್ಟರಿ ನಿಮ್ದು ಎನ್ನುವುದೆಲ್ಲಾ ಬಿಟ್ಟು ಬಿಡಿ. ಈ ವರ್ಲ್ಡೇ ನನ್ ಟೆರಿಟ್ಟರಿ’ ಎಂದು ಖಡಕ್ ವಾರ್ನಿಂಗ್ ಡೈಲಾಗ್ ಹೊಡೆದಿದ್ದಾರೆ ಯಶ್.