Publish Date: Tue, 07 Jan 2020 (11:30 IST)
Updated Date: Tue, 07 Jan 2020 (11:32 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿರುವ ಅಭಿಮಾನಿಗಳು ಸಕಲ ಸಿದ್ಧತೆ ನಡೆಸಿದ್ದಾರೆ.
ನಾಳೆ ಯಶ್ ಜನ್ಮ ದಿನವಾಗಿದ್ದು, ಇದನ್ನು ಒಂದು ಹಬ್ಬದಂತೆ ಅಭಿಮಾನಿಗಳು ಆಚರಿಸುತ್ತಿದ್ದಾರೆ. ನಗರದ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಈ ಬಗ್ಗೆ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಹೇಳಿದಂತೆ ಈ ವೇಳೆ ವಿಶ್ವದ ಯಾವುದೇ ನಟನಿಗೂ ಮಾಡಿರದ ಅತೀ ದೊಡ್ಡ ಕಟೌಟ್ ನ್ನು ಅನಾವರಣಗೊಳಿಸಲಾಗುತ್ತದೆ.
216 ಅಡಿ ಎತ್ತರದ ಕಟೌಟ್ ಸಿದ್ಧವಾಗಿದ್ದು ಇಂದು ಅಭಿಮಾನಿಗಳು ತೆಂಗಿನ ಕಾಯಿ ಒಡೆದು ಆರತಿ ಎತ್ತಿ ಪೂಜೆ ಮಾಡಿದ್ದಾರೆ. ನಾಳೆ ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಲಿರುವ ಯಶ್ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.