Publish Date: Tue, 07 Jan 2020 (11:13 IST)
Updated Date: Tue, 07 Jan 2020 (11:16 IST)
ಮಂಗಳೂರು: ಅವನೇ ಶ್ರೀಮನ್ನಾರಾಯಣ ಸಕ್ಸಸ್ ನಿಂದ ಖುಷಿಯಾಗಿರುವ ರಕ್ಷಿತ್ ಶೆಟ್ಟಿ ಆದಷ್ಟು ರಾಜ್ಯದ ಹಲವು ಥಿಯೇಟರ್ ಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಪ್ರವಾಸ ಮುಗಿಸಿದ ರಕ್ಷಿತ್ ಮತ್ತು ಬಳಗ ಇದೀಗ ತವರೂರು ಮಂಗಳೂರಿನತ್ತ ಹೊರಟಿದೆ. ಮಂಗಳೂರಿನ ಹಲವೆಡೆ ಸಂಚಾರ ಮಾಡಿ ಸಿನಿಮಾ ಯಶಸ್ವಿಗೊಳಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ವೇಳೆ ನಾಯಕಿ ಶಾನ್ವಿ ಶ್ರೀವಾಸ್ತವ್ ಕೂಡಾ ರಕ್ಷಿತ್ ಗೆ ಜತೆಯಾಗಿದ್ದಾರೆ. ಅಲ್ಲದೆ ನಿರ್ದೇಶಕ ಸಚಿನ್, ನಟ ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಕೂಡಾ ರಕ್ಷಿತ್ ಗೆ ಜತೆಯಾಗಿದ್ದಾರೆ.