Publish Date: Mon, 06 Jan 2020 (10:22 IST)
Updated Date: Mon, 06 Jan 2020 (10:23 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಬಿಡುಗಡೆ ಬಳಿಕ ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲು ರಕ್ಷಿತ್ ಶೆಟ್ಟಿ ಮತ್ತು ಬಳಗ ಉತ್ತರ ಕರ್ನಾಟಕದ ಹಲವು ಥಿಯೇಟರ್ ಗಳಿಗೆ ಭೇಟಿ ಕೊಟ್ಟಿದೆ.
ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ದಾವಣೆಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಥಿಯೇಟರ್ ಗಳಿಗೆ ತಮ್ಮ ಟೀಂ ಸಮೇತ ಭೇಟಿ ಕೊಟ್ಟಿರುವ ರಕ್ಷಿತ್ ಅವರ ಜತೆಗೆ ಸಿನಿಮಾ ಬಗ್ಗೆ ನೇರವಾಗಿ ಅಭಿಪ್ರಾಯ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆಯಿಂದ ದಿಲ್ ಖುಷ್ ಆಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಯಶಸ್ಸಿನ ಉತ್ಸಾಹದಲ್ಲಿರುವ ರಕ್ಷಿತ್ ಮತ್ತೆ ಜನರ ಪ್ರೀತಿ ಧನ್ಯವಾದ ಸಲ್ಲಿಸಿದ್ದಾರೆ.