Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬೇಸರ ತಂದ ಆ ಸುದ್ದಿ!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬೇಸರ ತಂದ ಆ ಸುದ್ದಿ!
ಬೆಂಗಳೂರು , ಸೋಮವಾರ, 6 ಜನವರಿ 2020 (10:41 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಎರಡು ದಿನ ಬಾಕಿಯಿರುವಾಗಲೇ ಅಭಿಮಾನಿಗಳಿ ಕೆಜಿಎಫ್ ತಂಡ ಬೇಸರದ ಸುದ್ದಿ ನೀಡಿದೆ.


ಈ ಬಾರಿ ಯಶ್ ಬರ್ತ್ ಡೇಗೆ ಕೆಜಿಎಫ್ 2 ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಮೊದಲೇ ಘೋಷಿಸಿತ್ತು. ಆದರೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಸುದ್ದಿಯ ಮೂಲಕ ನಿರಾಸೆ ಮಾಡಿದ್ದಾರೆ.

ಜನವರಿ 6 ವರೆಗೂ ಶೂಟಿಂಗ್ ಮುಂದುವರಿದಿರುವುದರಿಂದ ಯಶ್ ಬರ್ತ್ ಡೇ ದಿನ ಅಂದರೆ ಜನವರಿ 8 ರಂದು ಟೀಸರ್ ಬಿಡುಗಡೆ ಮಾಡಲು ಸಾಧ‍್ಯವಾಗುತ್ತಿಲ್ಲ. ಅದಕ್ಕಾಗಿ ವಿಷಾಧಿಸುತ್ತೇವೆ. ಆದರೆ ನಿಮಗೆ ಬೇಸರವಾಗದೇ ಇರಲು ನಿಮ್ಮ ಮೆಚ್ಚಿನ ಯಶ್ ಬರ್ತ್ ಡೇ ದಿನ ಕೆಜಿಎಫ್ 2 ನ ಎರಡನೇ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವನೇ ಶ್ರೀಮನ್ನಾರಾಯಣನಿಗಾಗಿ ರಕ್ಷಿತ್ ಶೆಟ್ಟಿ ಉತ್ತರ ಕರ್ನಾಟಕ ಯಾತ್ರೆ