Select Your Language

Notifications

webdunia
webdunia
webdunia
webdunia

ಡೈರೆಕ್ಷನ್ ಗೆ ಬರಲ್ಲ, ಇಪ್ಪತ್ತು ವರ್ಷ ಹೀರೋನೇ ಎಂದ ಶಿವರಾಜ್ ಕುಮಾರ್

ಡೈರೆಕ್ಷನ್ ಗೆ ಬರಲ್ಲ, ಇಪ್ಪತ್ತು ವರ್ಷ ಹೀರೋನೇ ಎಂದ ಶಿವರಾಜ್ ಕುಮಾರ್
ಬೆಂಗಳೂರು , ಮಂಗಳವಾರ, 7 ಜನವರಿ 2020 (11:21 IST)
ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಸಿನಿ ಜೀವನದ ಬಗ್ಗೆ ಮಾತನಾಡಿದ್ದಾರೆ.


ಶಿವಣ್ಣ ಎಷ್ಟೇ ವಯಸ್ಸಾದರೂ ಇನ್ನೂ ಯುವಕರಂತೇ ಕಾಣುತ್ತಾರೆ ಎನ್ನುವವರಿಗೆ ಇನ್ನೂ 20 ವರ್ಷ ಹೀಗೇ, ಹೀರೋ ಆಗಿಯೇ ಇರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.

‘ನಾನು ಡೈರೆಕ್ಷನ್ ಗೆ ಬರಲ್ಲ. ಯಾಕೆಂದರೆ ಅದಕ್ಕೆ ಇವರೆಲ್ಲಾ ನನ್ನ ಬಿಡಲ್ಲ. ಇನ್ನು 20 ವರ್ಷ ಹೀಗೇ ಇರ್ತೀನಿ, ಹೀರೋ ಆಗಿಯೇ ಇರ್ತೇನೆ. ಯಾಕೆಂದರೆ ನನಗೆ ಎಷ್ಟೇ ಸಾಕು ಅನಿಸಿದರೂ ಇವರೆಲ್ಲಾ ನೀವೇ ಬೇಕು ಅಂತ ಹೀರೋ ಮಾಡ್ತಾನೇ ಇರ್ತಾರೆ. ಯಾಕೇಂತ ನನಗೂ ಗೊತ್ತಿಲ್ಲ’ ಎಂದು ಶಿವಣ್ಣ ಹೇಳುತ್ತಿದ್ದಂತೇ ಶಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ‘ಲಕ್ಷ್ಮಿ’ ಶಾನ್ವಿ ಜತೆಗೆ ‘ನಾರಾಯಣ’ ರಕ್ಷಿತ್ ಶೆಟ್ಟಿ ಸುತ್ತಾಟ