Publish Date: Wed, 08 Jan 2020 (09:13 IST)
Updated Date: Wed, 08 Jan 2020 (09:18 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ಬಾರಿ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಗೌರವಾರ್ಥ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ಯಶ್ ಗೆ ಈ ಬಾರಿ ಅಭಿಮಾನಿಗಳೇ ಅದ್ಧೂರಿ ಬರ್ತ್ ಡೇ ಮಾಡುತ್ತಿದ್ದಾರೆ.
ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ ಯಶ್ ಗೆ ವಿವಿಧ ಭಾಷೆಯ, ರಾಜ್ಯಗಳ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.
ಇನ್ನು, ಯಶ್ ಬರ್ತ್ ಡೇ ನಿಮಿತ್ತ ಇಂದು ಕೆಜಿಎಫ್ 2 ಸಿನಿಮಾದ ಎರಡನೇ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಟೀಸರ್ ಕಾರಣಾಂತರಗಳಿಂದ ಬಿಡುಗಡೆ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡಲಿದ್ದಾರೆ.
ಇನ್ನು ಯಶ್ ಬರ್ತ್ ಡೇ ನಿಮಿತ್ತ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅಭಿಮಾನಿಗಳೇ ಸೇರಿಕೊಂಡು ರಾಕಿಂಗ್ ಉತ್ಸವ ಮಾಡುತ್ತಿದ್ದಾರೆ. ಇದಕ್ಕಾಗಿ ಮೆಜೆಸ್ಟಿಕ್ ನಿಂದ ನಂದಿ ಲಿಂಕ್ ಗ್ರೌಂಡ್ಸ್ ಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಇನ್ನು ಯಶ್ ಗೆಂದೇ ಮಾಡಲಾಗಿದ್ದ 5000 ಕೆಜಿ ತೂಕದ ಬೃಹತ್ ಕೇಕ್ ನ್ನು ಯಶ್ ಪತ್ನಿ ರಾಧಿಕಾ ಜತೆಗೆ ಕಟ್ ಮಾಡಿ ರಾಕಿಂಗ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದಲ್ಲದೆ ಬೃಹತ್ ಕಟೌಟ್ ಕೂಡಾ ಅನಾವರಣಗೊಂಡಿದೆ. ಅಂತೂ ಇಂದಿಡೀ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಕಿ ಬಾಯ್ ಹುಡುಗರು ಉತ್ಸವದಂತೆ ಆಚರಿಸುತ್ತಿದ್ದಾರೆ.