Publish Date: Fri, 10 Jan 2020 (09:08 IST)
Updated Date: Fri, 10 Jan 2020 (09:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಇದೇ ತಿಂಗಳಾಂತ್ಯಕ್ಕೆ ಸೆಟ್ಟೇರಲಿದೆ. ಇದೀಗ ಚಿತ್ರತಂಡ ಭರ್ಜರಿ ತಯಾರಿಯಲ್ಲಿ ತೊಡಗಿದೆ.
ಈ ನಡುವೆ ಚಿತ್ರತಂಡ ಪಾತ್ರವರ್ಗದ ಆಯ್ಕೆ ಮಾಡುತ್ತಿದ್ದು, ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ. ಹೀಗಾಗಿ ನಟಿಸಲು ಆಸಕ್ತಿಯಿರುವ ಮಕ್ಕಳು ಮತ್ತು ಯುವಕ-ಯುವತಿಯರಿಗೆ ಆಡಿಷನ್ ಗೆ ಕರೆ ನೀಡಿದೆ.
ಆಸಕ್ತರು ನಾಲ್ಕು ಫೋಟೋ, ಒಂದು ನಿಮಿಷದ ವಿಡಿಯೋ ಕ್ಲಿಪ್ ಜತೆಗೆ 8660859361 ಎಂಬ ಮೊಬೈಲ್ ಸಂಖ್ಯೆಗೆ ವ್ಯಾಟ್ಸಪ್ ಮಾಡಬಹುದು.