Select Your Language

Notifications

webdunia
webdunia
webdunia
webdunia

ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಯ ಬಗ್ಗೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ

ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಯ ಬಗ್ಗೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ
ಬೆಂಗಳೂರು , ಶನಿವಾರ, 26 ಆಗಸ್ಟ್ 2023 (17:34 IST)
ಬೆಂಗಳೂರು: ಇತ್ತೀಚೆಗಷ್ಟೇ ಪತ್ನಿ ಸ್ಪಂದನಾರನ್ನು ಕಳೆದುಕೊಂಡ ದುಃಖದಲ್ಲಿರುವ ನಟ ವಿಜಯ್ ರಾಘವೇಂದ್ರ ಇಂದು ಪತ್ನಿಯ ಬಗ್ಗೆ ಭಾವುಕರಾಗಿ ವಿಡಿಯೋ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ವಿಜಯ್ ಮತ್ತು ಸ್ಪಂದನಾ ವೈವಾಹಿಕ ಬದುಕಿಗೆ 16  ವರ್ಷಗಳಾಗಿರುವ ಹಿನ್ನಲೆಯಲ್ಲಿ ರಾಘು ವಿಡಿಯೋವೊಂದನ್ನು ಹಂಚಿಕೊಂಡು ಪತ್ನಿಗೆ ಕಾವ್ಯ ಸಂದೇಶವೊಂದನ್ನು ಬರೆದಿದ್ದಾರೆ.

‘ಚಿನ್ನಾ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ
ಉಸಿರಲ್ಲಿ ಬೆರೆತು ಜೀವಂತವಾದೆ
ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು
ಮರೆಯದೆ… ತೊರೆಯದೆ ಎದೆಗೊತ್ತಿ ಪ್ರೀತಿಸುವೆ
ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು..’
ಎಂಬ ಭಾವುಕ ಸಾಲುಗಳನ್ನು ಮದುವೆ ವಾರ್ಷಿಕೋತ್ಸವದ ಅಂಗವಾಗಿ ಪತ್ನಿ ಸ್ಪಂದನಾಗೆ ಬರೆದಿದ್ದಾರೆ ವಿಜಯ್ ರಾಘವೇಂದ್ರ. ಅವರ ಈ ಸಾಲುಗಳು ಅನೇಕರ ಕಣ್ಣಂಚು ಒದ್ದೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲ್ಗುಡಿ ದಿನಗಳು ಕತೆಗಳಿಗೆ ಧ್ವನಿಯಾದ ನಟ ಅನಿರುದ್ಧ್