ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಟ್ರೈಲರ್ ಇಂದು ಅಧಿಕೃತವಾಗಿ ಲಾಂಚ್ ಆಗಿದೆ.
ಇಂದು ಹೈದರಾಬಾದ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಲೈಗರ್ ಟ್ರೈಲರ್ ಲಾಂಚ್ ಆಗಿದೆ. ಆಗಸ್ಟ್ 25 ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಟ್ರೈಲರ್ ನೋಡಿದರೆ ಇದು ಪಕ್ಕಾ ವಿಜಯ್ ದೇವರಕೊಂಡ ಸಿನಿಮಾ ಎಂದು ಗೊತ್ತಾಗುತ್ತದೆ.
ಟ್ರೈಲರ್ ತುಂಬಾ ವಿಜಯ್ ದೇವರಕೊಂಡ ಆಕ್ಷನ್ ದೃಶ್ಯಗಳಿವೆ. ಬಾಕ್ಸರ್ ಪಾತ್ರದಲ್ಲಿ ನಟಿಸಿರುವ ವಿಜಯ್ ಅದಕ್ಕೆ ತಕ್ಕಂತೆ ದೇಹ ಹುರಿಗೊಳಿಸಿರುವುದು ಎದ್ದು ಕಾಣುತ್ತದೆ. ವಿಜಯ್ ಅಲ್ಲದೆ, ಟ್ರೈಲರ್ ನಲ್ಲಿ ಅಭಿಮಾನಿಗಳ ಗಮನ ಸೆಳೆದಿರುವುದು ಅಮ್ಮನ ಪಾತ್ರ ಮಾಡಿರುವ ನಟಿ ರಮ್ಯಾ ಕೃಷ್ಣ. ಕೊನೆಗೆ ಬರುವ ಮೈಕ್ ಟೈಸನ್ ಕೂಡಾ ಕುತೂಹಲ ಹೆಚ್ಚಿಸಿದ್ದಾರೆ.