Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಮದುವೆಯಾಗ್ತಾರಾ ವಿಜಯ್ ದೇವರಕೊಂಡ? ಕುತೂಹಲ ಮೂಡಿಸಿದ ಫೋಟೋ

ವಿಜಯ್ ದೇವರಕೊಂಡ
ಹೈದರಾಬಾದ್ , ಬುಧವಾರ, 30 ಆಗಸ್ಟ್ 2023 (08:40 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯದಲ್ಲೇ ಮದುವೆಯಾಗಲಿದ್ದಾರಾ? ಅವರು ಪ್ರಕಟಿಸಿರುವ ಫೋಟೋವೊಂದು ಈಗ ಎಲ್ಲರ ತಲೆಯಲ್ಲಿ ಇಂತಹದ್ದೊಂದು ಪ್ರಶ್ನೆ ಮೂಡಲು ಕಾರಣವಾಗಿದೆ.

ಒಬ್ಬ ಹುಡುಗಿಯ ಕೈ ಹಿಡಿದುಕೊಂಡಿರುವ ಫೋಟೋ ಪ್ರಕಟಿಸಿರುವ ವಿಜಯ್ ದೇವರಕೊಂಡ ‘ಹೊಸ ವಿಚಾರಗಳು ನಡೆಯುತ್ತಿವೆ. ಇದು ನಿಜವಾಗಿಯೂ ವಿಶೇಷ. ಸದ್ಯದಲ್ಲೇ ಘೋಷಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಕೈ ರಶ್ಮಿಕಾ ಮಂದಣ್ಣರಿದ್ದರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಇನ್ನು ಕೆಲವರು ಇದು ಮದುವೆ ಬಗ್ಗೆ ವಿಜಯ್ ನೀಡುತ್ತಿರುವ ಸುಳಿವು ಎನ್ನುತ್ತಿದ್ದರೆ ಮತ್ತೆ ಕೆಲವರು ಯಾವುದೋ ಸಿನಿಮಾ ಘೋಷಣೆಗೆ ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ಉದ್ಘಾಟನೆಗೆ ಹಂಸಲೇಖ: ಪರ-ವಿರೋಧ ಚರ್ಚೆ ಶುರು