Select Your Language

Notifications

webdunia
webdunia
webdunia
webdunia

ನಾನೂ ಮದುವೆಯಾಗಿ ಮಕ್ಕಳ ಮಾಡ್ಕೋಬೇಕು: ವಿಜಯ್ ದೇವರಕೊಂಡ

Vijay Devarakonda

Krishnaveni K

ಹೈದರಾಬಾದ್ , ಶನಿವಾರ, 30 ಮಾರ್ಚ್ 2024 (11:20 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಸಂದರ್ಶನವೊಂದರಲ್ಲಿ ತಮ್ಮ ಮದುವೆ, ಭವಿಷ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಆಗಾಗ ವಿಜಯ್ ದೇವರಕೊಂಡ ಮದುವೆ ಬಗ್ಗೆ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ರಶ್ಮಿಕಾ ಮಂದಣ್ಣ ಜೊತೆ ಅವರು ಡೇಟಿಂಗ್ ನಲ್ಲಿದ್ದಾರೆ. ಈ ವರ್ಷ ಮದುವೆಯಾಗುತ್ತಾರೆ ಎಂಬಿತ್ಯಾದಿ ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ಇದರ  ಬಗ್ಗೆ ಮಾತನಾಡಿದ್ದಾರೆ.

ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ನನಗೂ ಮದುವೆ ಆಗಬೇಕು, ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆಸೆಯಿದೆ. ಆದರೆ ಅದು ಈ ವರ್ಷ ಅಂತೂ ಖಂಡಿತಾ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಂಡಿತಾ ನಾನು ಲವ್ ಮ್ಯಾರೇಜ್ ಆಗುತ್ತೇನೆ ಎಂದಿದ್ದಾರೆ.

ಅಪ್ಪ-ಅಮ್ಮ ಮೆಚ್ಚುವ ಹುಡುಗಿಯನ್ನೇ ಲವ್ ಮಾಡಿ ಮದುವೆಯಾಗುವುದು ಎಂದಿದ್ದಾರೆ. ಆದರೆ ತಮ್ಮ ಹುಡುಗಿ ಬಗ್ಗೆ ಯಾವುದೇ ಬಿಟ್ಟುಕೊಟ್ಟಿಲ್ಲ. ಕೆಲವು ತಿಂಗಳ ಹಿಂದೆ ವಿಜಯ್-ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಇಬ್ಬರೂ ಅದನ್ನು ಅಲ್ಲಗಳೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಅನಿಲ್ ಕಪೂರ್ ನನ್ನ ಜೊತೆ ಮಾತನಾಡ್ತಿಲ್ಲ: ಬೋನಿ ಕಪೂರ್