Photo Courtesy: Instagram
ಮುಂಬೈ: ಬಾಲಿವುಡ್ ಸಹೋದರ ಜೋಡಿ ಅನಿಲ್ ಕಪೂರ್-ಬೋನಿ ಕಪೂರ್ ನಡುವೆ ಬಿರುಕುಂಟಾಗಿದೆ. ತಮ್ಮನ ಮುನಿಸಿನ ಬಗ್ಗೆ ಬೋನಿ ಕಪೂರ್ ಹೇಳಿಕೊಂಡಿದ್ದಾರೆ.
ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ನಡುವೆ ಈಗ ಎಲ್ಲವೂ ಸರಿಯಿಲ್ಲವಂತೆ. ಇದಕ್ಕೆ ಕಾರಣ ನೋ ಎಂಟ್ರಿ ಎರಡನೇ ಪಾರ್ಟ್ ಸಿನಿಮಾ. ನೋ ಎಂಟ್ರಿ ಮೊದಲನೇ ಭಾಗದಲ್ಲಿ ಸಲ್ಮಾನ್ ಖಾನ್ ಜೊತೆಗೆ ಅನಿಲ್ ಕಪೂರ್ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿತ್ತು.
ಇದೀಗ ಬೋನಿ ಕಪೂರ್ ನೋ ಎಂಟ್ರಿ ಪಾರ್ಟ್ 2 ಮಾಡಲು ಹೊರಟಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಬೇಕಿತ್ತು. ಆದರೆ ಅವರ ಪಾತ್ರ ಅಗತ್ಯವಿಲ್ಲ ಎಂದು ಬೋನಿ ಕಪೂರ್ ಹೇಳಿದ್ದರಂತೆ. ಈ ಬಗ್ಗೆ ಅನಿಲ್ ಜೊತೆ ಮಾತನಾಡುವ ಮೊದಲೇ ಈ ವಿಚಾರ ಲೀಕ್ ಆಗಿತ್ತು.
ಇದೇ ಅನಿಲ್ ಕಪೂರ್ ಮುನಿಸಿಗೆ ಕಾರಣವಾಗಿದೆ. ಇದೇ ಮುನಿಸಿನ ಕಾರಣಕ್ಕೆ ಅನಿಲ್ ಕಪೂರ್ ಈಗಲೂ ನನ್ನ ಬಳಿ ಸರಿಯಾಗಿ ಮಾತನಾಡುತ್ತಿಲ್ಲ. ನಮ್ಮಿಬ್ಬರ ನಡುವಿನ ಬಾಂಧವ್ಯ ಈಗ ಮೊದಲಿನಂತಿಲ್ಲ ಎಂದು ಸ್ವತಃ ಬೋನಿ ಕಪೂರ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.