Publish Date: Fri, 07 Oct 2022 (19:05 IST)
Updated Date: Fri, 07 Oct 2022 (19:08 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಅನಂತ್ ನಾಗ್ ಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ಬೆಂಗಳೂರಿನ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಮಕುಲಾಧಿಪತಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹಿರಿಯ ನಟನಿಗೆ ಗೌರವ ಪ್ರಧಾನ ಮಾಡಿದರು.
ಈ ವೇಳೆ ಮಾತನಾಡಿರುವ ಅನಂತ್ ನಾಗ್ ನನಗೆ ಪ್ರಶಸ್ತಿಗಳ ಆಸೆಯಿಲ್ಲ. ಆದರೆ ನನ್ನ ಹೆಂಡತಿ ಒತ್ತಾಯ ಮಾಡಿದ್ದಕ್ಕೆ ಗೌರವ ಸ್ವೀಕರಿಸಿದೆ ಎಂದಿದ್ದಾರೆ.
-Edited by Rajesh Patil