Publish Date: Tue, 19 Jun 2018 (15:44 IST)
Updated Date: Tue, 19 Jun 2018 (15:46 IST)
ಇತ್ತೀಚೆಗೆ ಸುದೀಪ್ ಅವರಿಂದ `ಹಮ್ ಫಿಟ್ ತೋ ಇಂಡಿಯಾ ಫಿಟ್' ಸವಾಲನ್ನು ಸ್ವೀಕರಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರು ತಾವು ಫಿಟ್ ಎನ್ನುವುದು ಎಲ್ಲರಿಗಿಂತ ವಿಭಿನ್ನವಾಗಿ ನಿರೂಪಿಸಿದ್ದಾರೆ.
ಹೌದು. ನಟ ಉಪೇಂದ್ರ ಅವರು ಸುದೀಪ್ ಅವರಿಂದ ಸವಾಲ್ ಸ್ವೀಕರಿಸಿ ಎಲ್ಲರ ಹಾಗೇ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ ಅಂತ ಅಂದುಕೊಂಡರೆ ಉಪೇಂದ್ರ ಅವರು ಮಾಡಿದ್ದೇ ಬೇರೆ ರೀತಿ. ಕೈಯಲ್ಲಿ ಗುದ್ದಲಿ ಹಿಡಿದು ಮಣ್ಣು ಅಗೆದು ಇದಕ್ಕಿಂತ ಬೆಸ್ಟ್ ವರ್ಕ್ ಔಟ್ ಮತ್ತೊಂದಿಲ್ಲ ಸುದೀಪ್ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಉಪ್ಪಿಯ ಕಸರತ್ತು ನೋಡಿದ ಕಿಚ್ಚ ಕೈಮುಗಿದು ಅಭಿನಂದನೆ ತಿಳಿಸಿದ್ದಾರೆ.