ಬೆಂಗಳೂರು: ಬಹಳ ದಿನಗಳ ನಂತರ ನಿರ್ದೇಶನಕ್ಕಿಳಿದಿರುವ ರಿಯಲ್ ಸ್ಟಾರ್ ಉಪೇಂದ್ರ ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.
ಯುಐ ಎಂಬ ವಿಶಿಷ್ಟ ಟೈಟಲ್ ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಉಪೇಂದ್ರ ಚಿತ್ರೀಕರಣ ಆರಂಭಿಸಿದ್ದಾರೆ. ತಮ್ಮ ಸಿನಿಮಾಗಾಗಿ ಸುಮಾರು 8 ಎಕರೆ ವಿಶಾಲ ಪ್ರದೇಶದಲ್ಲಿ ಉಪೇಂದ್ರ ವಿಶೇಷ ಸೆಟ್ ಹಾಕಿಕೊಂಡಿದ್ದಾರಂತೆ. ಉಪೇಂದ್ರ ಸಿನಿಮಾಗಳೆಂದರೆ ಜನರಿಗೆ ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಇಷ್ಟು ಬೃಹತ್ ಸೆಟ್ ಹಾಕಿಕೊಂಡು ಚಿತ್ರೀಕರಣ ನಡೆಸುತ್ತಿದ್ದಾರೆಂದರೆ ಕೇಳಬೇಕೇ?