ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾ ನಿನ್ನೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದೆಷ್ಟು ಇಲ್ಲಿದೆ ವಿವರ.
ಉಪೇಂದ್ರ ಸಿನಿಮಾಗಳೆಂದರೆ ಅರ್ಥ ಮಾಡಿಕೊಳ್ಳಲು ಕೆಲವು ಸಮಯ ಬೇಕು. ಯುಐ ಸಿನಿಮಾವೂ ಅದೇ ರೀತಿಯಿದೆ. ಸಿನಿಮಾ ನೋಡಲ ಬಂದ ಪ್ರೇಕ್ಷಕರಿಗೆ ನೀವು ಬುದ್ಧಿವಂತರಾಗಿದ್ದರೆ ಈಗಲೇ ಥಿಯೇಟರ್ ನಿಂದ ಎದ್ದು ಹೋಗಿ ಎಂದು ಆರಂಭದಲ್ಲೇ ಉಪೇಂದ್ರ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದರು.
ಈ ಸಿನಿಮಾವನ್ನು ಮೊದಲ ದಿನ ನೋಡಿದ ಹೆಚ್ಚಿನ ಪ್ರೇಕ್ಷಕರು ಏನೂ ಆರ್ಥವಾಗುತ್ತಿಲ್ಲ, ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕು ಎನ್ನುತ್ತಲೇ ಸಾಕಷ್ಟು ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡಿದ್ದಾರೆ. ಟಿಪಿಕಲ್ ಉಪೇಂದ್ರ ಶೈಲಿಯ ಸಿನಿಮಾ ಇದು.
ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿಯಲ್ಲೂ ಬಿಡುಗಡೆಯಾಗಿದೆ. ಆದರೆ ಕನ್ನಡದಷ್ಟು ಬೇರೆ ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿಲ್ಲ. ಮೊದಲ ದಿನ ಸಿನಿಮಾ ಸುಮಾರು 7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದರಲ್ಲಿ ಬಹುತೇಕ ಕನ್ನಡದಲ್ಲೇ 6 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇಂದು ನಾಳೆ, ವೀಕೆಂಡ್ ಆಗಿರುವುದರಿಂದ ಎಷ್ಟು ಕಲೆಕ್ಷನ್ ಆಗಲಿದೆ ಎನ್ನುವುದು ಗೊತ್ತಾಗಲಿದೆ.