Select Your Language

Notifications

webdunia
webdunia
webdunia
webdunia

ಯುಐ ಸಿನಿಮಾದಲ್ಲಿ ಉಪೇಂದ್ರರ ಚೀಪ್ ಹಾಡಿನ ಸಾಲು ಕೇಳಿ ತಲೆಕೆಡಿಸಿಕೊಂಡ ಪ್ರೇಕ್ಷಕರು

UI Movie

Krishnaveni K

ಬೆಂಗಳೂರು , ಬುಧವಾರ, 14 ಫೆಬ್ರವರಿ 2024 (12:48 IST)
Photo Courtesy: Twitter
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಯುಐ ಸಿನಿಮಾದ ಚೀಪ್ ಹಾಡಿನ ಪ್ರೋಮೋ ಬಿಡುಗಡೆಯಾಗಿದ್ದು, ಹಾಡು ಕೇಳಿ ಕೇಳುಗರು ಫುಲ್ ಕನ್ ಫ್ಯೂಸ್ ಆಗಿದ್ದಾರೆ.

ಉಪೇಂದ್ರ ಸಿನಿಮಾಗಳ ಹಾಡು ಎಂದರೆ ಹಾಗೆಯೇ. ಸಾಹಿತ್ಯ ಮತ್ತು ಟ್ಯೂನ್ ಜೊತೆಗೆ ಸ್ಟೆಪ್ಸ್ ನಿಂದ ವೈರಲ್ ಆಗುತ್ತದೆ. ಇದೀಗ ಇಂದು ವಾಲೆಂಟೈನ್ಸ್ ಡೇ ನಿಮಿತ್ತ ಚೀಪ್ ಹಾಡಿನ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಸಾಲುಗಳು ಸ್ವಲ್ಪ ಡಬಲ್ ಮೀನಿಂಗ್ ಇದೆ ಅನಿಸಿದರೂ ಬೇರೆಯೇ ಒಳಾರ್ಥ ಕೊಡುವಂತಿದೆ.

ಅಜನೀಶ್ ಬಿ ಲೋಕನಾಥ್ ಸಂಗೀತ  ಸಂಯೋಜಿಸಿರುವ ‘ಚೀಪ್’ ಹಾಡಿಗೆ ವಿಜಯ್ ಪ್ರಕಾಶ್, ನಕಾಶ್ ಅಜೀಜ್, ದೀಪಕ್ ಬ್ಲ್ಯೂ ಅವರು ಧ್ವನಿ ನೀಡಿದ್ದಾರೆ. ಲಹರಿ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ‘ಎಲ್ಲ ಚೀಪ್ ಚೀಪ್. ನಂದು ಬಲು ದೊಡ್ಡದು, ಅವನಿಗಿಂತ ನಿಂದು ಚಿಕ್ಕದು, ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್ ಚೀಪ್..’ ಎಂಬುದಾಗಿ ಹಾಡಿನ ಸಾಹಿತ್ಯವಿದೆ. ಈ ಸಾಹಿತ್ಯ ನೋಡಿ ವೀಕ್ಷಕರು ತಲೆಕೆರೆದುಕೊಂಡಿದ್ದಾರೆ. ಆದರೆ ಹಾಡು ಮಾತ್ರ ಸೂಪರ್ ಹಿಟ್ ಆಗುವ ಲಕ್ಷಣವಿದೆ.

ಅಂದ ಹಾಗೆ ಫೆಬ್ರವರಿ 26 ರಂದು ಫುಲ್ ಹಾಡು ಬಿಡುಗಡೆಯಾಗಲಿದೆ. ಸ್ಯಾಂಡಲ್ ವುಡ್ ನಲ್ಲಿ ಹಾಡಿನ ಮೂಲಕವೇ ಟ್ರೆಂಡ್ ಸೃಷ್ಟಿಸಿದವರು ಉಪೇಂದ್ರ. ಈಗ ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡುತ್ತಿರುವ ಅವರ ಯುಐ ಸಿನಿಮಾದ ಮೊದಲ ಹಾಡೂ ಟ್ರೆಂಡ್ ಆಗುವ ಹಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನುಮಾನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್: ಪಾತ್ರವೇನು?