Select Your Language

Notifications

webdunia
webdunia
webdunia
webdunia

ಹಾಲಿವುಡ್ ರೇಂಜ್ ನಲ್ಲಿದೆ ಯುಐ ಸಿನಿಮಾ ಟೀಸರ್: ಲಿಂಕ್ ಇಲ್ಲಿದೆ ನೋಡಿ

Upendra
Photo Courtesy: Twitter
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಲುಕ್ ವಿಭಿನ್ನವಾಗಿದೆ ಎಂದು ಪೋಸ್ಟರ್ ನೋಡಿಯೇ ಹೇಳಬಹುದು.

ಇದೀಗ ಟೀಸರ್ ನೋಡಿದ ಜನ ಸಿನಿಮಾ ಹಾಲಿವುಡ್ ರೇಂಜ್ ನಲ್ಲಿದೆ ಎನ್ನುತ್ತಿದ್ದಾರೆ. ಯುಐ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಸಿನಿಮಾ ಕತೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ವಿಶೇಷವೆಂದರೆ ಸಾಧು ಕೋಕಿಲ ಡಿಫರೆಂಟ್ ಅವತಾರದಲ್ಲಿ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪೇಂದ್ರ ಮತ್ತು ಸಾಧು ಕೋಕಿಲ,ರವಿಶಂಕರ್  ಬಿಟ್ಟರೆ ಚಿತ್ರದ ಬೇರೆ ಯಾವುದೇ ಪಾತ್ರವನ್ನು ಟೀಸರ್ ನಲ್ಲಿ ರಿವೀಲ್ ಮಾಡಲಾಗಿಲ್ಲ.

ಉಪೇಂದ್ರ ಬಹಳ ವರ್ಷದ ನಂತರ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿರುವುದರಿಂದ ಸಹಜವಾಗಿಯೇ ಕುತೂಹಲವಿದೆ. ಲಹರಿ ಯೂ ಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಲಾಂಚ್ ಆಗಿದ್ದು, ಲಿಂಕ್ ಇಲ್ಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಬರ್ತ್ ಡೇಗೆ ಬಿಡುಗಡೆಯಾದ ಟಾಕ್ಸಿಕ್ ಪೋಸ್ಟರ್ ಹೇಗಿದೆ ನೋಡಿ