ಇತ್ತೀಚೆಗೆ ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ ರಿಯಲ್ ಸ್ಟಾರ್ ಉಪೇಂದ್ರ ಸ್ವಾತಂತ್ರ್ಯ ದಿನೋತ್ಸವದಂದು ತಮದೇ ಆದ ವಿಶಿಷ್ಟ ವಿಶ್ನೇಷಣೆ ಮೂಲಕ ಸ್ವಾತಂತ್ರ್ಯ ದಿನೋತ್ಸವಕ್ಕೆ ವಿಶ್ ಮಾಡಿದ್ದಾರೆ.
ಸ್ವಾತಂತ್ರ್ಯ ಎಂದರೆ ಬಿಡುಗಡೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈಗ ನಮ್ಮೊಳಗಿನ ಅಪನಂಬಿಕೆ, ಅನುಮಾನ, ಆಲಸ್ಯದಿಂದ ನಮಗೆ ಬಿಡುಗಡೆ ಬೇಕಾಗಿದೆ. ಹಣ, ತೋಳ್ಬಲ, ಜಾತಿವರ್ಗಗಗಳಿಂದ ಮುಕ್ತವಾದ ಪ್ರಜಾಕೀಯ ಪಕ್ಷ ಉದಯವಾಗಬೇಕಿದೆ.
ಐಡಿಯಾ ಓಕೆ ಆದರೆ.. ಈ ಆದರೆ, ಎಂಬ ಪದವನ್ನ ಕಿತ್ತೆಸೆಯೋಣ.. ಆಗಿಯೇ ಆಗುತ್ತದೆ ಎಂದು ನಂಬೋಣ. ನಂಬಿಕೆಯೇ ಶಕ್ತಿ, ನಂಬಿಕೆಯೇ ಬಲ, ನಂಬಿಕೆಯೇ ಜೀವನ. ಎಲ್ಲರಿಗೂ ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪ್ರಜಾಕೀಯದ ಉಗಮದ ಬಗ್ಗೆ ಘೋಷಿಸಿದ್ದ ಉಪ್ಪಿ 3 ಇಮೇಲ್ ಯಡಿಗಳನ್ನ ಕ್ರಿಯೇಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಸಾರ್ವಜನಿಕರನ್ನ ಕೋರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ