Publish Date: Tue, 15 Aug 2017 (10:11 IST)
Updated Date: Tue, 15 Aug 2017 (10:15 IST)
ಬೆಂಗಳೂರು: ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ಗೆ ಬೆಂಗಳೂರು ನಂಟಿದೆ. ಇದೀಗ ಕ್ರಿಕೆಟ್ ನಲ್ಲಿ ಬಿಸಿಸಿಐ ಆಡಲು ಅವಕಾಶ ಮಾಡಿಕೊಡದ ಕಾರಣ ಶ್ರೀಶಾಂತ್ ಸ್ಯಾಂಡಲ್ ವುಡ್ ನತ್ತ ಪಯಣ ಬೆಳೆಸಿದ್ದಾರೆ.
ಈಗಾಗಲೇ ಮಲಯಾಳ ಸಿನಿಮಾವೊಂದರಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಶ್ರೀಶಾಂತ್ ಇದೀಗ ಕನ್ನಡ ಸಿನಿಮಾವೊಂದರಲ್ಲಿ ನಟಿಸಲಿರುವ ಸುದ್ದಿ ಬಂದಿದೆ.
ಕೆಂಪೇಗೌಡ 2 ಚಿತ್ರದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಮಲ್ ನಾಯಕರಾಗಿ ನಟಿಸುತ್ತಿರುವ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸುತ್ತಿದ್ದಾರೆ.