ನಟ, ನಿರ್ದೇಶಕ, ಕನ್ನಡ ಪರ ಹೋರಾಟಗಾರ ಉಪೇಂದ್ರ ಕನ್ನಡ ಚಳುವಳಿ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಅವರು ಕೇಳಿದಲ್ಲಿ ಟಿಕೆಟ್ ನೀಡಲಾಗುವುದು ಎಂದು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಹ್ವಾನ ನೀಡಿದ್ದಾರೆ.
	ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಜಾತಿಬಲ, ಅಧಿಕಾರ ಬಲ, ಹಣಬಲ, ತೋಳ್ಬಲದಿಂದ ರಾಜಕಾರಣವನ್ನು ಕುಲಗೆಡಿಸಿವೆ. ವಿಭಿನ್ನ ಯೋಚನೆಯುಳ್ಳ ಉಪೇಂದ್ರ ಅವರಿಗೆ ಪಕ್ಷ ಸ್ವಾಗತಿಸಲಿದೆ ಎಂದು ತಿಳಿಸಿದ್ದಾರೆ.
 
 			
 
 			
					
			        							
								
																	
	 
	ಉಪೇಂದ್ರ ಅವರ ಚಿಂತನೆಯಂತೆ ಹಲವಾರು ಯುವಕರು ಅವರೊಂದಿಗೆ ಕೈಜೋಡಿಸಲಿದ್ದಾರೆ.ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ಸ್ಥಾಪಿಸಬೇಕಾಗಿದೆ ಎಂದರು.
	 
	ನಟ ಉಪೇಂದ್ರ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರೂ ಟಿಕೆಟ್ ನೀಡಲು ಪಕ್ಷದ ಪರವಾಗಿ ಸಿದ್ದರಿದ್ದೇವೆ ಎಂದು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
	
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.