Webdunia - Bharat's app for daily news and videos

Install App

ಯುಐ ಸಿನಿಮಾದ ಆರಂಭದಲ್ಲೇ ಪ್ರೇಕ್ಷಕರಿಗೆ ಎದ್ದು ಹೋಗಿ ಎಂದ ಉಪೇಂದ್ರ

Krishnaveni K
ಶುಕ್ರವಾರ, 20 ಡಿಸೆಂಬರ್ 2024 (10:25 IST)
Photo Credit: X
ಬೆಂಗಳೂರು: ಉಪೇಂದ್ರ ಸಿನಿಮಾ ಎಂದರೆ ಹಾಗೇನೇ. ಎಲ್ಲವೂ ಡಿಫರೆಂಟ್ ಆಗಿಯೇ ಇರುತ್ತದೆ. ಪ್ರೇಕ್ಷಕರ ತಲೆಗೆ ಹುಳ ಬಿಡೋದರಲ್ಲಿ ಉಪ್ಪಿ ನಿಸ್ಸೀಮ. ಇಂದು ರಿಲೀಸ್ ಆಗಿರುವ ಯುಐ ಸಿನಿಮಾವೂ ಅದೇ ರೀತಿಯಿದೆ.

ಯುಐ ಸಿನಿಮಾ ಇಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು ಮೊದಲ ಶೋ ನೋಡಿದ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಪಕ್ಕಾ ಉಪ್ಪಿ ಶೈಲಿಯ ಸಿನಿಮಾ ಇದಾಗಿದ್ದು, ಇದೊಂದು ಮಾಸ್ಟರ್ ಪೀಸ್ ಬಿಡಿ ಎಂದು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.

ಆದರೆ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಆರಂಭದಲ್ಲೇ ಉಪ್ಪಿ ಶಾಕ್ ಕೊಟ್ಟಿದ್ದಾರೆ. ಟೈಟಲ್ ಕಾರ್ಡ್ ಬರುವ ಮೊದಲೇ ‘ನೀವು ಬುದ್ಧಿವಂತರಾಗಿದ್ದರೆ ಈಗಲೇ ಚಿತ್ರಮಂದಿರದಿಮದ ಎದ್ದು ಹೋಗಿ. ನೀವು ದಡ್ಡರಾಗಿದ್ದರೆ ಈ ಚಿತ್ರವನ್ನು ಪೂರ್ತಿಯಾಗಿ ನೋಡಿ’ ಎಂದು ಸಂದೇಶ ಕೊಟ್ಟಿದ್ದಾರೆ.

ಸಿನಿಮಾ ನೋಡಲು ಬರುವ ಪ್ರೇಕ್ಷಕರು ಹೀಗೆ ಹೇಳುವ ಧೈರ್ಯವಿರಬೇಕು ಎಂದರೆ ಅದು ಉಪೇಂದ್ರಗೆ ಮಾತ್ರ ಎಂದು ಪ್ರೇಕ್ಷಕರು ಹೇಳಿದ್ದಾರೆ. ಆರಂಭದಲ್ಲೇ ಉಪ್ಪಿ ಪ್ರೇಕ್ಷಕರ ತಲೆಗೆ ಈ ಮೂಲಕ ಹುಳ ಬಿಡುತ್ತಾರೆ. ಟೈಟಲ್ ಕಾರ್ಡ್ ನ್ನೇ ವಿಭಿನ್ನವಾಗಿ ಹಾಕಲಾಗಿದೆ. ಕ್ಯಾಮರಾ, ಲೈಟ್ಸ್ ಜೊತೆಗೆ ಮೆದುಳು ಇರುವ ವಿಶಿಷ್ಟ ಟೈಟಲ್ ಕಾರ್ಡ್ ನ್ನು ತೋರಿಸಲಾಗುತ್ತದೆ. ಇಡೀ ಸಿನಿಮಾದಲ್ಲೇ ಉಪೇಂದ್ರ ಆವರಿಸಿದ್ದಾರೆ. ಉಪೇಂದ್ರ ನನ್ನೊಳಗಿನ ನಾನು ಮತ್ತೊ ಹೊರಗೆ ಇರುವ ನಾನು ಎನ್ನುವ ಎರಡು ಕ್ಯಾರೆಕ್ಟರ್ ಮಾಡುತ್ತಾರೆ. ಈ ಸಿನಿಮಾದಲ್ಲಿ ನನ್ನೊಳಗಿನ ನಾನು ಗೆಲ್ಲುತ್ತೇವಾ, ಹೊರಗೆ ಕಾಣುವ ನಾನು ಗೆಲ್ಲುತ್ತೇವಾ ಎನ್ನುವುದೇ ಸಿನಿಮಾದ ಕತೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments