ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಲಿಯೋ ಸಿನಿಮಾದಿಂದ ನಾಯಕಿ ಪಾತ್ರಧಾರಿ ತ್ರಿಶಾ ಹೊರನಡೆದಿದ್ದಾರೆ ಎಂಬಿತ್ಯಾದಿ ರೂಮರ್ ಗಳು ಕೆಲವು ದಿನಗಳ ಮೊದಲು ಹರಿದಾಡಿತ್ತು. ಆದರೆ ಅದೀಗ ಸುಳ್ಳು ಎಂದು ಸಾಬೀತಾಗಿದೆ.
ಲಿಯೋ ನಿರ್ದೇಶಕ ಲೋಕೇಶ್ ಕನಗರಾಜು ಬರ್ತ್ ಡೇ ಪಾರ್ಟಿಯಲ್ಲಿ ತ್ರಿಶಾ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಎಲ್ಲರ ಜೊತೆ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ವಿಜಯ್, ಸಂಜಯ್ ದತ್ ಸೇರಿದಂತೆ ಇಡೀ ಲಿಯೋ ಚಿತ್ರತಂಡ ಸೇರಿತ್ತು.
ಈ ಮೂಲಕ ತಾವು ಈ ಸಿನಿಮಾದಿಂದ ಹೊರಗುಳಿದಿರುವ ರೂಮರ್ ಗಳಿಗೆ ತ್ರಿಶಾ ತಕ್ಕ ಉತ್ತರ ನೀಡಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಹಿಟ್ ಜೋಡಿ ವಿಜಯ್-ತ್ರಿಶಾ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಿದು.